×
Ad

100 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ

Update: 2016-12-27 18:46 IST

ಹೊಸದಿಲ್ಲಿ,ಡಿ.27: ಕೇರಳದ ಕೊಲ್ಲಂ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಲಭ್ಯವಾಗು ವುದರೊಂದಿಗೆ 2016ರ ಅಂತ್ಯದೊಳಗೆ ದೇಶಾದ್ಯಂತ 100 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆಯನ್ನು ಒದಗಿಸುವ ತನ್ನ ಗುರಿಯನ್ನು ಭಾರತೀಯ ರೈಲ್ವೆಯು ಸಾಧಿಸಿದೆ.

2017ರೊಳಗೆ ಒಟ್ಟು 400 ಪ್ರಮಖ ನಿಲ್ದಾಣಗಳನ್ನು ವೈ-ಫೈ ಸೇವಾ ವ್ಯಾಪ್ತಿಗೆ ತರುವುದು ಇಲಾಖೆಯ ಮುಂದಿನ ಗುರಿಯಾಗಿದೆ. ಗೂಗಲ್ ರೈಲ್ವೆಯ ಈ ಯೋಜನೆಯಲ್ಲಿ ಸಹಭಾಗಿತ್ವ ಹೊಂದಿದೆ.

 ಈ ವರ್ಷದ ಜನವರಿಯಲ್ಲಿ ಮೊದಲ ಉಚಿತ ವೈ-ಫೈ ಸೇವೆ ಮುಂಬೈ ಸೆಂಟ್ರಲ್ ನಿಲ್ದಾಣದಲ್ಲಿ ಆರಂಭಗೊಂಡಿತ್ತು. ಬಳಿಕ ಭುವನೇಶ್ವರ, ಬೆಂಗಳೂರು, ಹೌರಾ, ಕಾನ್ಪುರ, ಮಥುರಾ ಮತ್ತು ಮಂಗಳೂರು ಸೆಂಟ್ರಲ್ ಸೇರಿದಂತೆ ಪ್ರಮುಖ ನಿಲ್ದಾಣಗಳ ನಂತರ ಇದೀಗ ಕೊಲ್ಲಂ ನಿಲ್ದಾಣದಲ್ಲಿ ವೈ-ಫೈ ಸೇವೆಯ ಅಳವಡಿಕೆಯೊಂದಿಗೆ 100 ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News