ಆಂಧ್ರ-ತೆಲಂಗಾಣದಲ್ಲಿ ಕೋಳಿಕಾಳಗ ನಿಷೇಧ
Update: 2016-12-27 20:57 IST
ಹೈದರಾಬಾದ್, ಡಿ.27: ಕೋಳಿ ಕಾಳಗದ ಮೇಲಿನ ನಿಷೇಧವನ್ನು ಹೈದರಾಬಾದ್ ಹೈಕೋರ್ಟ್ ಸೋಮವಾರ ಎತ್ತಿ ಹಿಡಿದಿದ್ದು, ಜನವರಿಯ ಸಂಕ್ರಾಂತಿ ಹಬ್ಬದ ವೇಳೆ ಈ ನಿಷೇಧ ಉಲ್ಲಂಘನೆಯಾಗದಂತೆ ಖಚಿತಪಡಿಸಬೇಕೆಂದು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಪಕ್ಷಿಗಳನ್ನು ಕ್ರೌರ್ಯಕ್ಕೆ ಒಳಪಡಿಸಲಾಗುತ್ತಿದೆಯೆಂಬುದನ್ನು ಗಮನಿಸಿದ ವಿಭಾಗೀಯ ಪೀಠ, ಕೇವಲ ಹಬ್ಬದ ಸಮಯದಲ್ಲಿ ಮಾತ್ರವಲ್ಲದೆ ಎಲ್ಲ ಕಾಲಕ್ಕೂ ಈ ಸಂಪ್ರದಾಯಕ್ಕೆ ಅವಕಾಶ ನೀಡಬಾರದೆಂದು ಅಭಿಪ್ರಾಯಿಸಿದೆ.