×
Ad

ಬಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ

Update: 2016-12-27 22:29 IST

ಕಾರ್ಕಳ, ಡಿ.27: ಬಜರಂಗದಳ ಮುಖಂಡ ಕಾರ್ಕಳ ತೆಳ್ಳಾರು ರಸ್ತೆಯ ಅನಿಲ್ ಪ್ರಭು(36) ಎಂಬವರಿಗೆ ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಅನಿಲ್ ಪ್ರಭು ಡಿ.26ರಂದು ರಾತ್ರಿ 9:30ರ ಸುಮಾರಿಗೆ ಮನೆಯಲ್ಲಿರು ವಾಗ ಇರ್ಫಾನ್, ದೀಪಕ್ ಆಚಾರಿ ಎಂಬವರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅನಿಲ್ ಪ್ರಭುರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿ ದ್ದರು. ಈ ವೇಳೆ ನೆರೆಮನೆಯ ಸದಾನಂದ ಶೆಟ್ಟಿ ಎಂಬವರು ವಿಚಾರಿಸಲು ಬಂದಾಗ ಆರೋಪಿಗಳು ಬೈಕಿನಲ್ಲಿ ಪರಾರಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News