ಉಡುಪಿ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ
ಉಡುಪಿ, ಡಿ.27: ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳ ಲಾಗಿರುವ ಮೂರು ದಿನಗಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಂಗಳವಾರ ಚಾಲನೆ ನೀಡಿದರು.
ಕ್ರೀಡೆಯು ಮನರಂಜನೆಯ ಜೊತೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಾನಸಿಕ ಒತ್ತಡ ನಿವಾ ರಣೆಗೆ ಮತ್ತು ರಕ್ತದೊತ್ತಡ, ಮಧುಮೇಹ ಕಾಯಿಲೆಯನ್ನು ದೂರ ಮಾಡಲು ಚಟುವಟಿಕೆಯಿಂದ ಇರಲು ಕ್ರೀಡೆ ಬಹಳಷ್ಟು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕ್ರೀಡೆ ಎಂಬುದು ಮನುಷ್ಯನ ಜೀವನ ಅವಿಭಾಜ್ಯ ಅಂಗವಾಗಿದೆ. ಸಾವಿ ರಾರು ವರ್ಷಗಳಿಂದ ಮನುಷ್ಯ ಕ್ರೀಡೆಯನ್ನು ಆಡಿಕೊಂಡು ಬಂದಿದ್ದಾನೆ. ಅದಕ್ಕಾಗಿಯೇ ಜಗತ್ತಿನ ಎಲ್ಲ ದೇಶಗಳು ಕ್ರೀಡೆಗೆ ಬಹಳಷ್ಟು ಮಹತ್ವವನ್ನು ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಅವರು ತಿಳಿಸಿದರು.
ನಾಗೇಶ್ ಗೌಡ ಕ್ರೀಡಾಜ್ಯೋತಿ ಬೆಳಗಿಸಿದರು.
ಉಡುಪಿ ಡಿಆರ್‌ಎ ಆರ್‌ಎಸ್ಸೈ ಪುಟ್ಟಣ ಪ್ರಮಾಣ ವಚನ ಬೋಧಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಸ್ವಾಗತಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷ ವಿಷ್ಣುವರ್ಧನ ಎನ್. ವಂದಿಸಿದರು.
ಕಾರ್ಕಳ ಎಎಸ್ಪಿ ಸುಮನಾ, ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯ್ಕಿ, ಉಡುಪಿ ಡಿವೈಎಸ್ಪಿ ಕುಮಾರ್‌ಸ್ವಾಮಿ ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಪ್ರಭಾರ ಪಿಎಸ್ಸೈ ಬಿ.ಮನಮೋಹನ್ ರಾವ್ ಕಾರ್ಯ ಕ್ರಮ ನಿರೂಪಿಸಿದರು.