×
Ad

ಮಣಿಪಾಲ : ಕಸೂತಿ ತರಬೇತಿ ಉದ್ಘಾಟನೆ

Update: 2016-12-27 22:50 IST

ಮಣಿಪಾಲ, ಡಿ.27: ಸಿಂಡಿಕೇಟ್ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ಮಹಿಳೆ ಯರಿಗೆ ಮೂರು ವಾರಗಳ ಕಸೂತಿ ತರಬೇತಿಯು ಭಾರತೀಯ ವಿಕಾಸ ಟ್ರಸ್ಟಿನ ವತಿಯಿಂದ ಸೋಮವಾರ ಉದ್ಘಾಟನೆಗೊಂಡಿತು.

ತರಬೇತಿಯನ್ನು ಉದ್ಘಾಟಿಸಿದ ಸಿಂಡಿಕೇಟ್ ಬ್ಯಾಂಕಿನ ಕ್ಷೇತ್ರ ಮಹಾ ಪ್ರಬಂಧಕ ಸತೀಶ್ ಕಾಮತ್ ಮಾತನಾಡಿ ಹೊಲಿಗೆ ಕ್ಷೇತ್ರದಲ್ಲಿ ಸ್ವಉದ್ಯೋಗ ನಡೆಸುವವರು ಹೊಲಿಗೆ ಕೌಶಲ್ಯದ ಜೊತೆಗೆ ಕಸೂತಿ ಕಲೆಯ ಬಗ್ಗೆಯೂ ಪರಿಣಿತಿ ಹೊಂದಿದರೆ ಹೆಚ್ಚಿನ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.

 ಇಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಸ್ವಉದ್ಯೋಗ ಪ್ರಾರಂಭಿಸಲು ಅಗತ್ಯವಿದ್ದಲ್ಲಿ ಬೇಕಾದ ಎಲ್ಲ ಆರ್ಥಿಕ ಸಹಾಯ ನೀಡಲು ಸಿಂಡಿಕೇಟ್ ಬ್ಯಾಂಕ್ ಸದಾ ಸಿದ್ಧವಿದೆ ಎಂದು ಸತೀಶ್ ಕಾಮತ್ ಭರವಸೆ ನೀಡಿದರು.

ಭಾರತೀಯ ವಿಕಾಸ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ತರಬೇತಿ ಅವಧಿಯಲ್ಲಿ ಕೈ ಕಸೂತಿ ಮತ್ತು ಯಂತ್ರ ಕಸೂತಿ ಬಗ್ಗೆ ಸಮಗ್ರ ಮಾಹಿತಿ, ತರಬೇತಿ ನೀಡಲಾಗುತ್ತದೆ. ಜೊತೆಗೆ ಪೇಪರ್ ಮತ್ತು ಬಟ್ಟೆ ಬ್ಯಾಗ್ ತಯಾರಿಕೆಯನ್ನೂ ತಿಳಿಸಿ ಕೊಡಲಾಗುತ್ತದೆ ಎಂದರು.

  ಬಿವಿಟಿ ಆಡಳಿತಾಧಿಕಾರಿ ಐ.ಜಿ.ಕಿಣಿ ವಂದಿಸಿದರು. ಬಿವಿಟಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಕಾರ್ಯಕ್ರಮ ರೂಪಿಸಿದರು. ಸಂಪನ್ಮೂಲ ವ್ಯಕ್ತಿ ಮುಕ್ತಾ ಶ್ರೀನಿವಾಸ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲೆಯ 25ಕ್ಕೂ ಹೆಚ್ಚು ಮಹಿಳೆಯರು 21 ದಿನಗಳ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News