90% ಹಳೆ 500,1000 ನೋಟುಗಳು ವಾಪಸ್ , ತಲೆಕೆಳಗಾದ ಸರ್ಕಾರದ ಲಾಭದ ಲೆಕ್ಕಾಚಾರ

Update: 2016-12-28 03:29 GMT

ಹೊಸದಿಲ್ಲಿ: ನೋಟು ರದ್ದತಿ ಮೂಲಕ ಕಾಳಧನಿಕರಿಗೆ ಆಘಾತ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರದ ಲೆಕ್ಕಾಚಾರ ಬುಡಮೇಲಾಗಿದ್ದು, ಚಲಾವಣೆ ರದ್ದಾದ 500 ಹಾಗೂ 1000 ರೂಪಾಯಿಯ 15.4 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳ ಪೈಕಿ 14 ಕೋಟಿ ರೂ. ಮೌಲ್ಯದ ನೋಟುಗಳು ಬ್ಯಾಂಕ್‌ಗಳಲ್ಲಿ ಜಮೆ ಆಗಿವೆ.

ಸರ್ಕಾರದ ನಿರೀಕ್ಷೆಗೂ ಮೀರಿ ಅಧಿಕ ಮೌಲ್ಯದ ನೋಟುಗಳು ಖಾತೆಗಳಿಗೆ ಜಮೆ ಆಗಿವೆ. ಕಾಳಧನಿಕರ ಬಳಿ ಇರುವ ಸುಮಾರು 3 ಲಕ್ಷ ಕೋಟಿ ರೂಪಾಯಿ ಬ್ಯಾಂಕಿಗೆ ಮರಳುವ ಸಾಧ್ಯತೆ ಇಲ್ಲ ಎಂದು ಸರ್ಕಾರ ಅಂದಾಜಿಸಿತ್ತು.

ಇದರಿಂದಾಗಿ ಆರ್‌ಬಿಐ ಸರ್ಕಾರಕ್ಕೆ ನೀಡಲು ಉದ್ದೇಶಿಸಿದ್ದ ಲಾಭಾಂಶಕ್ಕೂ ಕತ್ತರಿ ಬಿದ್ದಂತಾಗಿದೆ. ಅಂದರೆ ಲೆಕ್ಕಕ್ಕೆ ಸಿಗದ ಹಣವನ್ನು ಬೇರೆ ಬೇರೆ ವಿಧಾನಗಳ ಮೂಲಕ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಸರ್ಕಾರವು ತೆರಿಗೆ ಆದಾಯದ ಮೂಲಕ ದೊಡ್ಡ ಠೇವಣಿಗಳಿಂದ ಲಾಭ ಪಡೆಯುವ ನಿರೀಕ್ಷೆ ಇದೆ. ಕುಟುಂಬಗಳು ತಮ್ಮ ಬಳಿ ಇದ್ದ ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿರುವುದರಿಂದ ಸಣ್ಣ ಉಳಿತಾಯ ರೂಪದಲ್ಲೂ ಸರ್ಕಾರಕ್ಕೆ ಆದಾಯ ಬರಲಿದೆ.

ಅಘೋಷಿತ ಕಾಳಧನವನ್ನು ಘೋಷಿಸಿದವರಿಗೆ ಶೇಕಡ 50ರಷ್ಟು ದಂಡ ವಿಧಿಸಿ, ಆ ಪೈಕಿ ಶೇಕಡ 25ನ್ನು ಬಡವರ ಕಲ್ಯಾಣಕ್ಕೆ ವೆಚ್ಚ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಇಂಥ ಘೋಷಣೆಯಿಂದ ಸರ್ಕಾರಕ್ಕೆ ಅಧಿಕ ಆದಾಯ ಬರುತ್ತದೆ ಎಂಬ ನಿರೀಕ್ಷೆ ಇದೀಗ ಸುಳ್ಳಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News