ಡಿ.29: ಸ್ನೇಹ ಪಬ್ಲಿಕ್ ಸ್ಕೂಲ್ ನ ದಶಮಾನೋತ್ಸವ ಸಮಾರಂಭ ಉದ್ಘಾಟನೆ

Update: 2016-12-28 07:39 GMT

ಮಂಗಳೂರು, ಡಿ.28: ನಗರದ ಬಜಾಲ್ ಪಕ್ಕಲಡ್ಕದಲ್ಲಿರುವ ಸ್ನೇಹ ಪಬ್ಲಿಕ್ ಸ್ಕೂಲ್ ನ ದಶಮಾನೋತ್ಸವ ಸಮಾರಂಭದ ಉದ್ಘಾಟನೆಯು ಡಿ.29ರಂದು ನಡೆಯಲಿದೆ.

ದಶಮಾನೋತ್ಸವದ ಹಿನ್ನೆಲೆಯಲ್ಲಿ ಹೊಸ ಕಟ್ಟಡ ಹಾಗೂ ಸಭಾಂಗಣದ ಉದ್ಘಾಟನೆ ಕೂಡ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಆಹಾರ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೊ, ಭಟ್ಕಳದ ಪಿ.ಬಿ.ಕನ್‌ಸ್ಟ್ರಕ್ಷನ್ ನ ನಿರ್ದೇಶಕ ಹಾಜಿ ಪಿ.ಬಿ.ಇಬ್ರಾಹೀಂ, ಮನಪಾ ಕಾರ್ಪೋರೇಟರ್‌ಗಳಾದ ಪ್ರವೀಣ್ಚಂದ್ರ ಆಳ್ವ, ಸುಮಯ್ಯ ಅಶ್ರಫ್, ಬಾವಾ ಫಿಶ್‌ಮಿಲ್ ನ ಅಧ್ಯಕ್ಷ ರಿಯಾಝ್ ಬಾವಾ, ಕಲ್ಲಡ್ಕ ಅನುಗ್ರಹ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಇಸ್ಹಾಕ್ ಫರಂಗಿಪೇಟೆ, ತರೀಕೆರೆ ಸರ್ಮದ್‌ಟ್ರೇಡರ್ಸ್‌ನ ಮಾಲಕ ಸರ್ಮದುಲ್ಲಾ ಖಾನ್, ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನ ಯಹ್ಯಾ ತಂಙಳ್ ಮದನಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಮುಹಮ್ಮದ್ ಕುಂಜಿ ಅಧ್ಯಕ್ಷತೆ ವಹಿಸಲಿದ್ದಾರೆ.


ಡಿ. 31ರಂದು ‘ಫುಡೀವಲ್ 2016’:

ದಶಮಾನೋತ್ಸವದ ಅಂಗವಾಗಿ ಡಿ.31ರಂದು ಶಾಲೆಯ ಕ್ರೀಡಾಂಗಣದಲ್ಲಿ ‘ಫುಡೀವಲ್-2016’ ಎಂಬ ಆಹಾರೋತ್ಸವ ಹಾಗೂ ಮನೋರಂಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದರ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ಉಪವಿಭಾಗದ ಅಸಿಸ್ಟೆಂಟ್‌ಕಮಿಷನರ್ ಶೃತಿ ಎನ್.ಎಸ್. ನೆರವೇರಿಸುವರು. ಅತಿಥಿಯಾಗಿ ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿ ಸಾಜಿದಾ ಮೂಮಿನ್ ಭಾಗವಹಿಸಲಿದ್ದಾರೆ ಎಂದು ಸ್ನೇಹ ಪಬ್ಲಿಕ್ ಸ್ಕೂಲ್ನ ಆಡಳಿತ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News