×
Ad

ವಿದ್ಯಾರ್ಥಿಗಳು ಶಿಸ್ತನ್ನು ಪಾಲಿಸಬೇಕು: ಶಾಸಕ ಲೋಬೊ

Update: 2016-12-28 13:21 IST

 ಮಂಗಳೂರು, ಡಿ.28: ವಿದ್ಯಾರ್ಥಿಗಳು ತಮ್ಮ ಜೀವನದ ಉದ್ದಕ್ಕೂ ಶಿಸ್ತನ್ನು ಪಾಲಿಸಬೇಕು. ಅದರೊಂದಿಗೆ ದೇಶದ ರಕ್ಷಣೆ ಮಾಡುವ ಕಾರ್ಯವನ್ನು ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಕರೆ ನೀಡಿದರು.

ಬೆಂಗ್ರೆಯಲ್ಲಿ ಭಾರತ ಸೇವಾದಳದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಶಶಿಕುಮಾರ ಬೆಂಗ್ರೆ ಮಾತನಾಡಿ ಬೆಂಗ್ರೆಯಂಥ ಪ್ರದೇಶದಲ್ಲಿ ಭಾರತ ಸೇವಾ ದಳದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಪ್ರದೇಶದಲ್ಲಿ ಅನೇಕ ಕ್ರೀಡೆಗಳಲ್ಲಿ ಆಸಕ್ತಿಯುಳ್ಳವರಿದ್ದು ದೊಡ್ಡ ಮೈದಾನದ ಅಗತ್ಯವಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News