×
Ad

ದಿಲೀಪ್ ಕುಮಾರ್ ಗೆ ಎಂ.ಎ. ಅರ್ಥಶಾಸ್ತ್ರದಲ್ಲಿ ಏಳನೆ ರ್ಯಾಂಕ್

Update: 2016-12-28 16:17 IST

ಕಡಬ, ಡಿ.28. ಕೋಡಿಂಬಾಳ ಗ್ರಾಮದ ಓಂತ್ರಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅಂಗ್ಲ ಭಾಷಾ ಪದವೀಧರ ಬಲ್ಯ ಗ್ರಾಮದ ಸಂಪಡ್ಕ ನಿವಾಸಿ ದಿಲೀಪ್ ಕುಮಾರ್ ಎಸ್. ಕುವೆಂಪು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯದ 2016ನೆ  ಸಾಲಿನ ಎಂ.ಎ. ಅರ್ಥಶಾಸ್ತ್ರದಲ್ಲಿ ಏಳನೆಯ ರ್ಯಾಂಕ್ ಗಳಿಸಿದ್ದಾರೆ.

  ಇವರು ಈ ಹಿಂದೆ ಅಳಗಪ್ಪ ವಿಶ್ವವಿದ್ಯಾನಿಲಯದಿಂದ ಎಂ.ಎ. (ಇಂಗ್ಲೀಷ್), ಕುವೆಂಪು ವಿಶ್ವವಿದ್ಯಾನಿಲಯದಿಂದ ಎಂ.ಎ. (ಇತಿಹಾಸ), ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಎಂ.ಇಡಿ (ಶಿಕ್ಷಣ) ಮತ್ತು ಮೈಸ್ ನಿಂದ ಡಿ.ಸಿ.ಎ. ಪದವಿಗಳನ್ನು ಪಡೆದಿರುತ್ತಾರೆ.

ಇವರು ಸಂಪಡ್ಕ ನಿವಾಸಿ ಗೋಪಾಲಕೃಷ್ಣ ಮತ್ತು ಪ್ರೇಮ ದಂಪತಿಯ ಹಿರಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News