ಯಾರನ್ನೋ ‘ಮಂಗ ’ಎಂದು ಕರೆದು ಜೀವಕ್ಕೆರವಾದ ಯುವಕ

Update: 2016-12-28 11:56 GMT

ಸಂಭಲ್(ಉ.ಪ್ರ),ಡಿ.28: ಯಾರನ್ನಾದರೂ ‘ಮಂಗ ’ಎಂದು ಕರೆಯುವುದು ವ್ಯಕ್ತಿಯ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಇದಕ್ಕೊಂದು ತಾಜಾ ನಿದರ್ಶನ ಇಲ್ಲಿದೆ. ತಮಾಷೆಗಾಗಿ ‘ಮಂಗ’ ಎಂದು ಕರೆದ ಯುವಕನೋರ್ವ ತನ್ನ ಜೀವವನ್ನೇ ಕಳೆದು ಕೊಂಡಿದ್ದಾನೆ.

ಇಲ್ಲಿಯ ನಖಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಆರಿಫ್(20) ಮತ್ತು ಸಲೀಂ ಎನ್ನುವವರ ನಡುವೆ ಜಗಳ ನಡೆದಿತ್ತು. ಈ ವೇಳೆ ಆರಿಫ್ ಸಲೀಂನನ್ನು ಉದ್ದೇಶಿಸಿ ‘ಮಂಗ ’ಎಂದು ಕರೆದಿದ್ದ. ಇದರಿಂದ ಕೋಪಗೊಂಡ ಸಲೀಂ ತನ್ನ ಬಳಿಯಿದ್ದ ಪಿಸ್ತೂಲನ್ನು ಹೊರತೆಗೆದು ಅತ್ಯಂತ ಸಮೀಪದಿಂದ ಆರಿಫ್‌ನ ತಲೆಗೆೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಹೆಚ್ಚುವರಿ ಎಸ್‌ಪಿ ರಾಮ ಮೂರತ್ ಯಾದವ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News