ಕುಸಿದು ಬಿದ್ದು ಸಾವು
Update: 2016-12-28 17:38 IST
ಪುತ್ತೂರು, ಡಿ.28 : ಪುತ್ತೂರಿನ ಇಂಡಿಯನ್ ಓವರ್ ಸೀಸ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ಮಡಿಕೇರಿ ನಿವಾಸಿ ಅಣ್ಣಪ್ಪ (46) ಎಂಬವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಪುತ್ತೂರು ತಾಲೂಕಿನ ಕುಂಬ್ರ ಎಂಬಲ್ಲಿ ನಡೆದಿದೆ.
ಇಲ್ಲಿನ ಪರ್ಪುಂಜ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಚಲಾಯಿಸುತ್ತಿದ್ದ ಬೈಕ್ ಕೆಲವು ದಿನಗಳ ಹಿಂದೆ ಅಪಘಾತವಾಗಿ ಅಣ್ಣಪ್ಪ ಅವರು ಗಾಯಗೊಂಡಿದ್ದರು. ಬಳಿಕ ಚೇತರಿಸಿಕೊಂಡ ಅವರು ಮಂಗಳವಾರ ಸಂಜೆ ಕುಂಬ್ರಕ್ಕೆ ಬಂದವರು ಅಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೃತರ ಪತ್ನಿ ಮಂಜುಳಾ ಅವರು ಹೃದಾಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಂಪ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.