ಭಟ್ಕಳ ಪುರಸಭೆಗೆ ಎಸಿಬಿ ದಳ ದಾಳಿ;ಮುಖ್ಯಾಧಿಕಾರಿ ಬಂಧನ
ಭಟ್ಕಳ , ಡಿ.28 : ಮನೆಗೆ ನೀರಿನ ಸಂಪರ್ಕಕ್ಕಾಗಿ ಪೈಪ್ ಲೈನ್ ಒದಗಿಸಲು ಸಾರ್ವಜನಿಕರಿಂದ ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ದಾಳಿ ಮಾಡಿದ ಕಾರವಾರ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಎಂ.ಜಿ.ರಮೇಶ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಘಟನೆ ಬುಧವಾರ ನಡೆದಿದೆ.
ಭಟ್ಕಳದ ಮನೆಯೊಂದಕ್ಕೆ ನೀರಿನ ಸಂರ್ಪರ್ಕ ಒದಗಿಸಲು 4 ಸಾವಿರ ಲಂಚ ಕೇಳಿದ ಆರೋಪದಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರನ್ನು ಆಧರಿಸಿ ದಾಳಿ ಮಾಡಿದ ಕಾರವಾರ ಜಿಲ್ಲಾ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳಾದ ರಮೇಶ, ರಾಜೇಶ್ ಪ್ರಭು, ವಿಶ್ವನಾಥ್,ಗಜೇಂದ್ರ ಹಾಗೂ ಮಹೆಬೂಬ್ ಅಲಿ , ನಾಲ್ಕು ಸಾವಿರ ರೂ ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿ : ಸಾರ್ವಜನಿಕರು ಅಭಿಪ್ರಾಯ
ಭಟ್ಕಳ ಪುರಸಭೆಯಲ್ಲಿ ಎಂ.ಜಿ. ರಮೇಶ್ ಕಳೆದ 6 ತಿಂಗಳಿನಿಂದ ಮುಖ್ಯಾಧಿಕಾರಿಯಾಗಿ ಸೇವೆಗೆ ಸೇರಿದ್ದು ಉತ್ತಮ ಆಡಳಿತ ನೀಡುತ್ತಿದ್ದರು. ಇವರು ಯಾವುದೆ ಲಂಚದ ಆಸೆ ಆಮಿಷಗಳಿಗೆ ಬಲಿಯಾದವರಲ್ಲ. ಭಟ್ಕಳ ಪುರಸಭೆಯಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳಿದ್ದು , ಅವರ ವಿರುದ್ಧ ಹಲವು ಬಾರಿ ದೂರು ನೀಡಿದರೂ ಕ್ರಮ ಜರಗಿಸದ ಅಧಿಕಾರಿಗಳು, ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಯನ್ನು ಬೇಕಂತಲೆ ಲಂಚ ಪ್ರಕಣದಲ್ಲಿ ಸಿಲುಕಿಸಲಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.