ಕಾರು- ಬೈಕ್ ಢಿಕ್ಕಿ: ವಿದ್ಯಾರ್ಥಿಗೆ ಗಾಯ
Update: 2016-12-28 20:25 IST
ಪುತ್ತೂರು, ಡಿ.28 : ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಕಾಲೇಜ್ ವಿದ್ಯಾರ್ಥಿಯೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಪುತ್ತೂರು ನಗರದ ಬೊಳುವಾರು ಎಂಬಲ್ಲಿ ನಡೆದಿದೆ.
ಬೈಕ್ ಸವಾರ ಮೂಲತಃ ಮದ್ದೂರು ನಿವಾಸಿ ಪುತ್ತೂರು ನಗರದ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಆದರ್ಶ(19) ಗಾಯಗೊಂಡ ವಿದ್ಯಾರ್ಥಿ.
ಬೊಳುವಾರಿನಿಂದ ಉಪ್ಪಿನಂಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಏಕಮುಖ ರಸ್ತೆಯಲ್ಲಿ ನಿಯಮ ಬಾಹಿರಾಗಿ ಕಾರು ಚಲಾಯಿಸಿದ ಪರಿಣಾಮದಿಂದ ಈ ಘಟನೆ ಸಂಭವಿಸಿದೆ.
ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.