×
Ad

ವಿಶ್ವದ ಅತ್ಯಂತ ಉದ್ದದ ಹೈಸ್ಪೀಡ್ ರೈಲು ಮಾರ್ಗ ಕಾರ್ಯಾರಂಭ

Update: 2016-12-28 22:05 IST

ಬೀಜಿಂಗ್,ಡಿ.28: ಜಗತ್ತಿನ ಅತ್ಯಂತ ದೀರ್ಘದೂರದ ಹೈಸ್ಪೀಡ್ ಬುಲೆಟ್ ರೈಲುಮಾರ್ಗವು ಬುಧವಾರ ಚೀನಾದಲ್ಲಿ ಕಾರ್ಯಾರಂಭಿಸಿದೆ. ತಾಸಿಗೆ ಗರಿಷ್ಠ 330 ಕಿ.ಮೀ. ವೇಗದಲ್ಲಿ ಚಲಿಸುವ ಈ ಬುಲೆಟ್ ರೈಲು ದೇಶದ ಸಮೃದ್ಧ ಪೂರ್ವ ಕರಾವಳಿಯನ್ನು ಅಭಿವೃದ್ಧಿಯಲ್ಲಿ ಹಿಂದುಳಿದ ನೈಋತ್ಯ ಚೀನದ ಜೊತೆ ಸಂಪರ್ಕಿಸುತ್ತದೆ.

2252 ಕಿ.ಮೀ. ವಿಸ್ತೀರ್ಣದ ಶಾಂಘಾ-ಕ್ಯುಮಿಂಗ್ ರೈಲು ಮಾರ್ಗವು ಚೀನಾದ ಝೆಝಿಯಾಂಗ್, ಜಿಯಾಂಗ್‌ಕ್ಸಿ,ಹುನಾನ್,ಗುಯಿಝೌ ಹಾಗೂ ಯುನಾನ್ ಪ್ರಾಂತಗಳಲ್ಲಿ ಪ್ರಯಾಣಿಸುತ್ತದೆ ಮತ್ತು ಶಾಂಘಾನಿಂದ ಕುಮಿಂಗ್ ನಡುವಿನ ಪ್ರಯಾಣದ ಅವಧಿಯನ್ನು 34ರಿಂದ 11 ತಾಸುಗಳಿಗೆ ಇಳಿಸಲಿದೆಯೆಂದು ಚೀನಾ ರೈಲ್ವೆ ನಿಗಮವು ತಿಳಿಸಿದೆ. ಚೀನವು ಈವರೆಗೆ 20 ಸಾವಿರಕ್ಕೂ ಕಿ.ಮೀ. ಅಧಿಕ ವಿಸ್ತೀರ್ಣದ ಹೈಸ್ಪೀಡ್ ರೈಲು ಮಾರ್ಗಗಳನ್ನು ನಿರ್ಮಿಸಿದೆ. 2030ರೊಳಗೆ ಹೈಸ್ಪೀಡ್ ರೈಲು ಮಾರ್ಗವನ್ನು 45 ಸಾವಿರ ಕಿ.ಮೀ.ಗೆ ವಿಸ್ತರಿಸುವ ಯೋಜನೆಯನ್ನು ಚೀನಾ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News