×
Ad

ಮೂಡುಬಿದಿರೆ : ತ್ರಿಂಶತಿ ಸಂಭ್ರಮಾಚರಣೆ

Update: 2016-12-28 23:15 IST

ಮೂಡುಬಿದಿರೆ, ಡಿ.28 : ದ.ಕ.ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ತ್ರಿಂಶತಿ ಸಂಭ್ರಮ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಕಿ.ಪ್ರಾ.ಶಾಲೆ ಪೆಂಚಾರು ಇದರ ತ್ರಿಂಶತಿ ಸಂಭ್ರಮಾಚರಣೆಯು ಶುಕ್ರವಾರ ಜರುಗಿತು.

 ಶಾಸಕ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ, ತೀರಾ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ 30 ರ ಸಂಭ್ರಮಾಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೆಲ್ಲಿಕಾರು ಗ್ರಾ.ಪಂ. ಅಧ್ಯಕ್ಷ ಜಯಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ನೆಲ್ಲಿಕಾರು ಗ್ರಾ.ಪಂ. ಉಪಾಧ್ಯಕ್ಷೆ ಕುಶಲಾ, ಸದಸ್ಯರಾದ ಶಶಿಧರ್, ಸುನಂದಾ, ಸಂತೋಷ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಬಿ. ಮುಖ್ಯ ಅತಿಥಿಗಳಾಗಿದ್ದರು.

ನ್ಯಾಯವಾದಿ ಕೆ.ಎಸ್.ಕಲ್ಲೂರಾಯ, ಮಾಂಟ್ರಾಡಿ ಕೊಂಬೆಟ್ಟುಗುತ್ತು ಯುವರಾಜ ಹೆಗ್ಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ರುಕ್ಕಯ್ಯ ಪೂಜಾರಿ, ಮಣಿಪಾಲ ಎಂ.ಐ.ಟಿ. ಪ್ರಾಧ್ಯಾಪಕ ಡಾ.ಸತ್ಯಶಂಕರ್ ಶರ್ಮಾ, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯಶೋಧರ್ ಎಂ., ಬಂಟ್ವಾಳದ ನ್ಯಾಷನಲ್ ಇನ್ಸುರೆನ್ಸ್ ಕಂಪೆನಿ ಲಿ. ಬ್ರಾಂಚ್ ಮ್ಯಾನೇಜರ್ ಎಂ.ಶಾಂತಾರಾಮ, ಪೆಂಚಾರು ದುರ್ಗಾ ನಿವಾಸ ಹರಿಯಪ್ಪ ಪೂಜಾರಿ, ಪೆಂಚಾರು ಶಾಲೆಯ ಪ್ರಥಮ ವಿದ್ಯಾರ್ಥಿನಿ ನವರತ್ನ ಉಪಸ್ಥಿತರಿದ್ದರು.

ಉಡುಪಿಯ ನಿವೃತ್ತ ಶಿಕ್ಷಕ ಕೃಷ್ಣರಾವ್, ಬಾಗಲಕೋಟೆಯ ಶಿಕ್ಷಕ ಮುಕುಂದ ಎಸ್ ಬಿರಾದರ್, ಬಿಜಾಪುರದ ಶಿಕ್ಷಕಿ ಲಕ್ಷ್ಮೀಬಾಯಿ, ಪಡುಬಿದ್ರೆ ಕಂಚಿನಡ್ಕ ಶಾಲೆಯ ಶಿಕ್ಷಕಿ ಶಶಿಕಲಾ, ನೆಲ್ಲಿಕಾರು ಪ್ರೌಢಶಾಲೆಯ ಶಿಕ್ಷಕ ಭೈರವೇಶ್ವರ ಭಟ್, ಅಳಿಯೂರು ಶಾಲೆಯ ಮುಖ್ಯ ಶಿಕ್ಷಕಿ ಅನ್ನಪೂರ್ಣ, ಕೋಟೆಬಾಗಿಲು ಶಾಲೆಯ ಶಿಕ್ಷಕಿ ಶಾಲಿನಿ ಯು.ಜಿ., ಬೆಳ್ತಂಗಡಿ ದೇವನಾರಿ ಶಾಲೆಯ ಶಿಕ್ಷಕಿ ಕವಿತಾ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

 ಜಿಲ್ಲಾ ಉತ್ತಮ ಕೃಷಿಕ ಪ್ರಶಸ್ತಿ ವಿಜೇತ ಶಿರ್ತಾಡಿಯ ಎಸ್.ಡಿ.ಸಂಪತ್ ಸಾಮ್ರಾಜ್ಯ, ಮಾಂಟ್ರಾಡಿಯ ಶ್ರೀ ದೇವಿ ಕೃಪಾದ ಟಿ.ಅನಂತ ಕೃಷ್ಣ ಕಲ್ಲೂರಾಯ, ರಾಜ್ಯ ಮಟ್ಟದ ಚೇತನಾ ಪ್ರಶಸ್ತಿ ವಿಜೇತೆ ರಶ್ಮಿ, ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯ ಪೋಸ್ಟ್ ಕಮಾಂಡರ್ ಮೈಕಲ್ ಡಿ’ಸೋಜಾ, ರಾಷ್ಟ್ರೀಯ ಯೋಗ ಪ್ರಶಸ್ತಿ ವಿಜೇತ ನಿಧೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಭಟ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಅರ್ಚನಾ ವರದಿ ವಾಚಿಸಿದರು.

ಶಿಕ್ಷಕ ಸುರೇಂದ್ರ ಜ್ಯೆನ್ ಹಾಗೂ ಗ್ರಾ.ಪಂ. ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಶ್, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ವಂದನಾರ್ಪಣೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News