×
Ad

‘ಅಲ್ ಫುರ್ಖಾನ್’ನಲ್ಲಿ ಎಕ್ಸ್‌ಪ್ಲೋರ್, ಎಜುಕೇಟ್, ಎನ್ಲೈಟನ್ ಪ್ರದರ್ಶನ

Update: 2016-12-28 23:54 IST

ಮೂಡುಬಿದಿರೆ, ಡಿ.28: ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ, ಅಲ್ ಫುರ್ಖಾನ್ ಇಸ್ಲಾಮಿಕ್ ಮಹಿಳಾ ಕಾಲೇಜು ಹಾಗೂ ಅರೆಬಿಕ್ ಮಹಿಳಾ ಕಾಲೇಜು ಸಹಯೋಗದಲ್ಲಿ ಮೂಡುಬಿದಿರೆಯ ಪುತ್ತಿಗೆಯಲ್ಲಿರುವ ಕ್ಯಾಂಪಸ್‌ನಲ್ಲಿ ಎಕ್ಸ್‌ಪ್ಲೋರ್, ಎಜುಕೇಟ್, ಎನ್ಲೈಟನ್ ಎಂಬ ಇಸ್ಲಾಮ್ ಹಾಗೂ ವಿಜ್ಞಾನ, ಅಧುನಿಕ ಜಗತ್ತು ಹಾಗೂ ಇಸ್ಲಾಮ್ ಅರ್ಥ ವ್ಯವಸ್ಥೆ ಕುರಿತ ಎರಡು ದಿನಗಳ ಪ್ರದರ್ಶನ ಇತ್ತೀಚೆಗೆ ನಡೆಯಿತು. ಮಂಗಳೂರು ಯುನಿಟಿ ಹೆಲ್ತ್ ಕೇರ್‌ನಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಾಗತಿಕವಾಗಿ ಜ್ಞಾನ ವಿಸ್ತರಿಸಲು ವೈಜ್ಞಾನಿಕ ಮಾತ್ರವಲ್ಲದೆ ಧಾರ್ಮಿಕ ಚಿಂತನೆ ಯಿರಬೇಕಾದದ್ದು ಅಗತ್ಯ ಎಂದರು.

ಮುಖ್ಯ ಅತಿಥಿಯಾಗಿ ಶಾಸಕ ಕೆ.ಅಭಯ ಚಂದ್ರ ಜೈನ್ ಭಾಗವಹಿಸಿದ್ದರು.

ಚೆನ್ನೈನ ವಿದ್ವಾಂಸ ಶೇಖ್ ಅನೀಸ್ ರಹ್ಮಾನ್ ಅಜ್ಮಿ ಮದನಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯ ಪಿ.ಕೆ.ಥೋಮಸ್, ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್ ಮುಖ್ಯ ಅತಿಥಿಗಳಾಗಿದ್ದರು.

 ಅಲ್ ಫುರ್ಖಾನ್ ಸಂಸ್ಥೆಯ ಅಧ್ಯಕ್ಷ ಯು.ಎಂ.ಮೊಯ್ದಿನ್ ಕುಂಞಿ, ಉಪಾಧ್ಯಕ್ಷರಾದ ಯು.ಎಂ.ಅಬ್ಬಾಸ್, ನಜ್ಮುದ್ದೀನ್ ಅಸ್ಸಾದಿ, ಕಾರ್ಯದರ್ಶಿ ಯು.ಟಿ.ಅಹ್ಮದ್ ಶರೀಫ್, ಕೋಶಾಧಿಕಾರಿ ಮುಹಮ್ಮದ್ ಅಶ್ಫಾಕ್, ನಿರ್ದೇಶಕ ಮಮ್ತಾಝ್, ಟ್ರಸ್ಟಿ ಯು.ಎಂ.ಇಕ್ಬಾಲ್, ಯು.ಎಂ. ಸಮೀರ್, ಯು.ಎಂ.ಫೈಝಲ್, ತಾಹಿರ್, ಆಡಳಿತಾಧಿಕಾರಿ ಮುಹಮ್ಮದ್ ಶಾಹಾಂ, ಟೆಕ್ನಿಕಲ್ ಅಡ್ಮಿನ್ ನೂರ್ ಮುಹಮ್ಮದ್, ಸದಸ್ಯರಾದ ಅಬ್ದುರ್ರಹ್ಮಾನ್, ಉದ್ಯಮಿ ಇಫ್ತಿಕಾರ್ ಅಹ್ಮದ್ ಉಪಸ್ಥಿತರಿದ್ದರು.

 ಹಕೀಬ್ ಜಾವೇದ್ ಸ್ವಾಗತಿಸಿದರು. ಮುಹಮ್ಮದ್ ಶಾಹಾಂ ವರದಿ ವಾಚಿಸಿದರು. ಫಕ್ರುದ್ದೀನ್ ರಾಝಿ ಕಾರ್ಯಕ್ರಮ ನಿರೂಪಿ ಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News