×
Ad

ಸ್ನೇಹ ಪಬ್ಲಿಕ್ ಸ್ಕೂಲ್ ದಶಮಾನೋತ್ಸವ

Update: 2016-12-28 23:58 IST

ಮಂಗಳೂರು, ಡಿ.28: ನಗರದ ಬಜಾಲ್ ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್‌ನ ದಶಮಾನೋತ್ಸವದ ಉದ್ಘಾಟನಾ ಸಮಾರಂಭ, ಹೊಸ ಕಟ್ಟಡ ಹಾಗೂ ಸಭಾಂಗಣದ ಉದ್ಘಾಟನೆ ಡಿ.29ರಂದು ನಡೆಯಲಿದೆ. ಮಂಗಳೂರು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಹಮ್ಮದ್ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

*ಡಿ.31ರಂದು ಫುಡೀವಲ್:

ದಶಮಾನೋತ್ಸವದ ಹಿನ್ನೆಲೆಯಲ್ಲಿ ಡಿ.31ರಂದು ಶಾಲೆಯ ಕ್ರೀಡಾಂಗಣದಲ್ಲಿ ಫುಡೀವಲ್-2016 ಎಂಬ ಆಹಾರೋತ್ಸವ ಹಾಗೂ ಮನರಂಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಆಯುಕ್ತೆ ಶೃತಿ ಎನ್.ಎಸ್. ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News