ಇಂದು ರಾಷ್ಟ್ರಪತಿ ಕೇರಳಕ್ಕೆ
Update: 2016-12-29 11:10 IST
ತಿರುವನಂತಪುರಂ,ಡಿ. 29: ಭಾರತೀಯ ಇತಿಹಾಸ ಕಾಂಗ್ರೆಸ್‌ನ 77ನೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗುರುವಾರ ಕೇರಳಕ್ಕೆ ಆಗಮಿಸುತ್ತಿದಾರೆ. ಬೆಳಗ್ಗೆ 11:30ಕ್ಕೆ ರಾಜಧಾನಿ ತಿರುವನಂತಪುರಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿಯಲಿದ್ದಾರೆ. ಕಾರ್ಯವಟ್ಟಂ ಜ್ಯೂಬಿಲಿ ಅಡಿಟೋರಿಯಂನಲ್ಲಿ ಅವರು ಇತಿಹಾಸ ಕಾಂಗ್ರೆಸ್ ಸಮ್ಮೇಳನವನ್ನು ಉದ್ಘಾಟಿಸುವರು.
ರಾಜ್ಯ ಪಾಲ ಪಿ.ಸದಾಶಿವಂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇತರ ಸಚಿವರು, ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಇತಿಹಾಸಕಾರಿಗಿರುವ ರಾಜ್ವಡೆ ಪ್ರಶಸ್ತಿಯನ್ನು ವಿತರಿಸಲಿದ್ದಾರೆ. ಕಾರ್ಯಕ್ರಮ ಮುಗಿಸಿಕೊಂಡು 1:30ಕ್ಕೆ ರಾಷ್ಟ್ರಪತಿ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.