ಡಿ.31 ರಂದು ಪ್ರಧಾನಿ ಮೋದಿ ಭಾಷಣ?
Update: 2016-12-29 12:44 IST
ಹೊಸದಿಲ್ಲಿ, ಡಿ.29: ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ಅಮಾನ್ಯಗೊಂಡು ಶುಕ್ರವಾರ 50 ದಿನಗಳು ಕಳೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ವರ್ಷಕ್ಕೆ ಮೊದಲು ಡಿ.31 ರಂದು ದೇಶವನ್ನುದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯಿದೆ.
ಡಿ.31 ರಂದು ರಾತ್ರಿ 7:30ಕ್ಕೆ ಪ್ರಧಾನಿ ಭಾಷಣವನ್ನು ಮಾಡಲಿದ್ದು, ನೋಟು ಬ್ಯಾನ್ ಬಳಿಕ ಆಗಿರುವ ಲಾಭ-ನಷ್ಟದ ಬಗ್ಗೆ ಪ್ರಸ್ತಾವಿಸುವ ಸಾಧ್ಯತೆಯಿದೆ. ನೋಟು ಬ್ಯಾನ್ ಬಳಿಕ ಎಲ್ಲರನ್ನು ಕಾಡುತ್ತಿರುವ ಸಮಸ್ಯೆಯ ಬಗ್ಗೆ ಕ್ರಮಕೈಗೊಳ್ಳುವ ಬಗ್ಗೆ, ಬಡವರು ಹಾಗೂ ರೈತರಿಗೆ ಹೊಸ ಯೋಜನೆ ಘೋಷಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.
ನ.8 ರಂದು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಬಗ್ಗೆ ಘೋಷಿಸಿದ್ದ ಪ್ರಧಾನಿ ಮೋದಿ ದೇಶದ ಪರಿಸ್ಥಿತಿಯನ್ನು ಸುಧಾರಿಸಲು ತನಗೆ 50 ದಿನಗಳ ಕಾಲಾವಕಾಶ ಕೊಡಬೇಕೆಂದು ವಿನಂತಿಸಿಕೊಂಡಿದ್ದರು.