ಸಚಿವ ಯು.ಟಿ ಖಾದರ್ ಭರ್ಜರಿ ಬ್ಯಾಟಿಂಗ್
Update: 2016-12-29 12:54 IST
ಕಾಸರಗೋಡು, ಡಿ.29: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಕೇರಳ ರಾಜ್ಯದ ಕಾಸರಗೋಡುವಿನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪಂದ್ಯಶ್ರೇಷ್ಠ ಪಡೆದು ಅಚ್ಚರಿಗೆ ಪಾತ್ರರಾಗಿದ್ದಾರೆ.
ಸದಾ ರಾಜಕೀಯದ ಓಡಾಟದಲ್ಲಿ ಬ್ಯುಸಿಯಾಗಿದ್ದ ಯು.ಟಿ.ಖಾದರ್ ಡಿ.28 ರಂದು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಸರಗೋಡಿಗೆ ತೆರಳಿದ್ದು ಈ ಸಂದರ್ಭ ಅವರ ಮಿತ್ರರೊಬ್ಬರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ತೆರಳಿದ್ದರು.
ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳೊತ್ತಾಯದ ಮೇರೆಗೆ ಕ್ರಿಕೆಟ್ ಪಂದ್ಯಾಟವನ್ನು ಆಡಿದ ಯು.ಟಿ ಖಾದರ್ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಪಾತ್ರರಾದರು. ಎರಡು ಓವರ್ ನ ಪ್ರೆಂಡ್ಲಿ ಮ್ಯಾಚ್ ನಲ್ಲಿ ಇವರು 13 ರನ್ ಗಳಿಸಿದ್ದು ಮಾತ್ರವಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಅವರ ಬ್ಯಾಟಿಂಗ್ ವೈಖರಿ ಇಲ್ಲಿದೆ ನೋಡಿ...