ಮುಖ್ಯಮಂತ್ರಿ ಕರೆದ ಸಭೆಗೆ ಸಚಿವರ ಗೈರು: ಸಭೆಮುಂದಕ್ಕೆ
Update: 2016-12-29 15:31 IST
ತಿರುವನಂತಪುರಂ,ಡಿ.29: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದ ಸಭೆಗೆ ಸಚಿವರ ಗೈರು ಹಾಜರಾಗಿದ್ದು, ಇದಕ್ಕೆ ಅತೃಪ್ತಿ ಸೂಚಿಸಿ ಮುಖ್ಯಮಂತ್ರಿ ಸಭೆಯನ್ನು ಮುಂದೂಡಿದ್ದಾರೆ. ವಸತಿ ಯೋಜನೆ ಅವಲೋಕನಕ್ಕೆ ಸಭೆ ಕರೆದ್ದಿದ್ದರು. ಈ ಯೋಜನೆ ಆರು ಸಚಿವಾಲಗಳಿಗೆ ಸಂಬಂಧಿಸಿದ್ದಾಗಿದೆ.
ಆದರೆ ಸಭೆಗೆ ಪರಿಶಿಷ್ಟ ಜಾತಿ-ವರ್ಗ ಸಚಿವ ಎ.ಕೆ. ಬಾಲನ್ ಒಬ್ಬರೇ ಬಂದಿದ್ದರು. ಅಬಕಾರಿ ಸಚಿವ ಇ. ಚಂದ್ರಶೇಖರನ್ ಸೆಕ್ರಟರಿಯೇಟ್‌ನಲ್ಲಿ ನಡೆಯುವ ಇನ್ನೊಂದು ಸಭೆ ಮುಗಿಸಿ ಬರುತ್ತೇನೆ ಎಂದಿದ್ದರು. ಸ್ಥಳೀಯಾಡಳಿತ ಸಚಿವ ಕೆ.ಟಿ. ಜಲೀಲ್, ಮೀನುಗಾರಿಕಾ ಸಚಿವೆ ಮೆರ್ಸಿಕುಟ್ಟಿಯಮ್ಮ, ಇಂಧನ ಸಚಿವ ಎಂಎಂ ಮಣಿ, ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಸಭೆಗೆ ಬಂದಿರಲಿಲ್ಲ. ಈ ಬಗ್ಗೆ ವಿವರಣೆ ಕೇಳಿದಾಗ ಎರಡುದಿವಸ ಮೊದಲಷ್ಟೇ ಸಚಿವರುಗಳಿಗೆ ಸಭೆಯ ಕುರಿತು ತಿಳಿಸಲಾಗಿದೆ ಎಂದು ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಭೆಯನ್ನು ಮುಂದೂಡಿದ್ದಾರೆಂದು ವರದಿ ತಿಳಿಸಿದೆ.