ಡಿ.31ರಂದು ತಾಜುಲ್ ಉಲಮಾ ಉರೂಸ್ ಸಮಾರೋಪ
ಮಂಗಳೂರು, ಡಿ.29: ಶತಮಾನದ ಶ್ರೇಷ್ಠ ವಿದ್ವಾಂಸ ನಾಯಕ ಶೈಖುನಾ ತಾಜುಲ್ ಉಲಮಾ ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ (ಉಳ್ಳಾಲ ತಂಳ್)ರವರ 3ನೆ ಉರೂಸ್ ಸಮಾರಂಭವು ಡಿ.31ರಂದು ಸಂಜೆ 4:30ಕ್ಕೆ ಎಟ್ಟಿಕ್ಕುಳಂನಲ್ಲಿ ಜರಗಲಿದೆ ಎಂದು ಮದನೀಸ್ ಅಸೋಸಿಯೇಶನ್‌ನ ಸಹ ಕಾರ್ಯದರ್ಶಿ ಕೆ.ಎ. ಬಶೀರ್ ಮದನಿ ಅಲ್‌ಕಾಮಿಲ್ ಕೂಳೂರು ತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರೋಪ ಸಮಾರಂಭದ ನೇತೃತ್ವವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಇ. ಸುಲೈಮಾನ್ ಉಸ್ತಾದ್ ವಹಿಸಲಿದ್ದು, ಅಖಿಲ ಭಾರತ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಷ್ಟ್ರೀಯ ಅಧ್ಯಕ್ಷ ಕೊಯಿಲಾಂಡಿ ಸೈಯದ್ ಅಲಿ ಬಾಫಖಿ ತಂಙಳ್, ಎಸ್‌ಎಂಎ ರಾಷ್ಟ್ರೀಯ ಅಧ್ಯಕ್ಷ ಇಬ್ರಾಹೀಮುಲ್ ಖಲೀಲ್ ತಂಙಳ್ ಕಡಲುಂಡಿ, ಎಸ್‌ವೈಎಸ್ ಕೇರಳ ರಾಜ್ಯಾಧ್ಯಕ್ಷ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಚಿತ್ತಾರಿ ಉಸ್ತಾದ್, ಮಾಟ್ಟೂಲ್ ತಂಙಳ್, ಪೊನ್ಮಳ ಉಸ್ತಾದ್, ಅಲಿಕುಂಞಿ ಉಸ್ತಾದ್, ಬೇಕಲ ಉಸ್ತಾದ್, ಮಾಣಿ ಉಸ್ತಾದ್, ಮಂಜಿನಾಡಿ ಅಬ್ಬಾಸ್ ಉಸ್ತಾದ್, ಸೈಯದ್ ಚೆರುಕುಂಞಿ ತಂಳ್, ಉಳ್ಳಾಲ ಬಾವ ಉಸ್ತಾದ್, ಸೈಯದ್ ಝಲ್ ಕೋಯಮ್ಮ ತಂಙಳ್, ಕುಂಬೋಲ್ ಆಟಕೋಯ ತಂಳ್, ಬಾಯಾರ್ ತಂಳ್, ಸಚಿವ ಯು.ಟಿ. ಖಾದರ್, ಯೆನೆಪೊಯ ಅಬ್ದುಲ್ಲ ಕುಂಞಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ, ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉರೂಸ್ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ತಾಜುಲ್ ಉಲಮಾರ ಶಿಷ್ಯಂದಿರ ಸಂಘಟನೆ ಮದನೀಸ್ ಅಸೋಸಿಯೇಶನ್ ಕೋರಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮದನೀಸ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಎನ್.ಎ.ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಉಪಾಧ್ಯಕ್ಷ ಮುತ್ತಿಸ್ ಅಲ್‌ಹಾಜ್ ಇಸ್ಮಾಯೀಲ್ ಮದನಿ ನೆಕ್ಕಿಲಾಡಿ, ಕಾರ್ಯದರ್ಶಿ ಕೆ.ಎಂ. ಮುಹಿಯುದ್ದೀನ್ ಮದನಿ, ಸದಸ್ಯ ಮರ್ಸೀನ್ ಆರ್.ಮುಹಮ್ಮದ್ ಮದನಿ ಉಪಸ್ಥಿತರಿದ್ದರು.