×
Ad

ಕಿನ್ಯ : ಹಳೆ ವಿದ್ಯಾರ್ಥಿ ಸಮಿತಿ ಅಧ್ಯಕ್ಷರಿಗೆ ಸನ್ಮಾನ

Update: 2016-12-29 18:12 IST

ಕೊಣಾಜೆ, ಡಿ.29 :  ಮಂಗಳೂರು ತಾಲೂಕಿನ ಕಿನ್ಯ ಗ್ರಾಮದ ಮುಸ್ಲಿಂ ಕೇಂದ್ರ ಜಮಾಅತ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕುತುಬಿಯಾ ಹಳೆ ವಿದ್ಯಾರ್ಥಿ ಸಮಿತಿಯು ಕಳೆದ 41ವರ್ಷಗಳಲ್ಲಿ ಧಾರ್ಮಿಕ,ಶೈಕ್ಷಣಿಕ,ಸಾಮಾಜಿಕ ರಂಗಗಳಲ್ಲಿ ಉತ್ತಮ ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಬರುತ್ತಿದೆ.   ಇದೀಗ ಸತತವಾಗಿ 11 ವರ್ಷ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಹಲವಾರು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ   ಮುಹಮ್ಮದ್ ರಹ್ಮತ್ ನಗರ ರವರಿಗೆ ಕುತುಬಿಯ ಹಳೆ ವಿದ್ಯಾರ್ಥಿ ಸಮಿತಿ ವತಿಯಿಂದ ಮೀಲಾದ್ ದಿನಾಚರಣೆ ಮತ್ತು ಸಮಿತಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಮಾಅತಿನ ಗಣ್ಯರಾದ ಹಾಜೀ ಸಾದುಕುಂಞಿ ಮಾಸ್ಟರ್, ಹಾಜೀ ಹುಸೈನ್ ಕುಂಞಿ ,ಅಬೂಸಾಲಿಹ್ ಹಾಜಿ ಕುರಿಯಕ್ಕಾರ್, ಮಹಮ್ಮದ್ ಬಶೀರ್ ರವರ ಗಣ್ಯ ಉಪಸ್ಥಿತಿಯಲ್ಲಿ  ಸಾರ್ವಜನಿಕರ ಪರವಾಗಿ  ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಮಾಅತಿನ ಖತೀಬರಾದ ಬಹು ಕಾಸಿಂ ದಾರಿಮಿ, ಮುದರ್ರಿಸ್ ಉಸ್ತಾದ್ ,ಜಮಾಆತ್ ಕಾರ್ಯದರ್ಶಿಗಳಾದ ಮೊಯಿದೀನ್ ಕುಞಿ(ಅಬ್ಬು),ಮಹಮ್ಮದ್,ಇಸ್ಮಾಯಿಲ್,ಸದರ್ ಉಸ್ತಾದರಾದ ಫಾರೂಕ್ ದಾರಿಮಿ ಮುಂತಾದವರು ಉಪಸ್ಥಿತರಿದ್ದರು.

ಅಧ್ಯಕ್ಷರ ಕಿರು ಪರಿಚಯವನ್ನು ಕುತುಬಿಯಾ ಹಳೆ ವಿದ್ಯಾರ್ಥಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಿನ್ಯ ರವರು ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News