×
Ad

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಯು.ಟಿ.ಖಾದರ್

Update: 2016-12-29 19:16 IST

ಕೊಣಾಜೆ , ಡಿ.29 : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಪ್ರಮುಖವಾಗಿ ಕುಡಿಯುವ ನೀರು ಹಾಗೂ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಜೀರು ಗ್ರಾಮದ ಅಡ್ಕ-ಭಂಡಾರಮನೆ ಪ್ರದೇಶದ ಜನರು ರಸ್ತೆಯ ಸಮಸ್ಯೆಯ ಬೇಡಿಕೆ ಇದೀಗ ನೆರವೇರಿದ್ದು, ಯಾವುದೇ ಕಾರ್ಯಯೋಜನೆ ಯಶಸ್ವಿಯಾಗಿ ನಡೆಯಬೇಕಾದರೆ ಜನರ ಸಹಕಾರ ಅಗತ್ಯ ಆಹಾರ ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು.

ಅವರು ಪಜೀರು ಗ್ರಾಮದ ಅಡ್ಕ-ಭಂಡಾರಮನೆ ರಸ್ತೆ ಕಾಮಗಾರಿಗೆ ಬುಧವಾರ ಶಿಲಾನ್ಯಾಸವನ್ನು ನೆರವೇರಿಸಿ ಅವರು ಮಾತನಾಡಿದರು.

 ಪಜೀರು ಗ್ರಾಮದಲ್ಲಿ ಈಗಾಗಲೇ ಹಲವಾರು ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ರೂಪಿಸಲಾಗಿದ್ದು, ವೈದ್ಯನಾಥನಗರದಿಂದ ವಜಲಗುಡ್ಡೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಈ ಭಾಗದ ಜನರು ರಸ್ತೆಗೆ ಬೇಕಾಗುವ ಜಾಗವನ್ನು ಬಿಡಲು ಒಪ್ಪಿದರೆ ನಮ್ಮ ಗ್ರಾಮ ನಮ್ಮ ಯೋಜನೆ ಮುಖಾಂತರ ರಸ್ತೆ ಕಾಮಗಾರಿ ಶೀಘ್ರವಾಗಿ ಆರಂಭವಾಗಲಿದೆ ಎಂದು ಅವರು ಹೇಳಿದರು.

 ಕಾರ್ಯಕ್ರಮದಲ್ಲಿ ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಉಮ್ಮರ್ ಪಜೀರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ, ಕುರ್ನಾಡು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ, ಉದ್ಯಮಿ ಭರತ್‌ರಾಜ್ ಶೆಟ್ಟಿ, ಪಜೀರು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಇಂತಿಯಾಝ್ , ನಝೀರ್ ಮೊಯ್ದಿನ್, ಸ್ಥಳೀಯರಾದ ಸದಾಶಿವ ಮಾಸ್ಟ್ರು, ಸುಬ್ರಾಯ ಪೂಜಾರಿ, ಪಂಚಾಯಿತಿ ಸದಸ್ಯರಾದ ಮಹಮ್ಮದ್ ರಫೀಕ್, ಶಾಫಿ, ಪ್ರೆಸಿಲ್ಲಾ, ಸುಕನ್ಯಾ, ಸೆವ್ರಿನ್ ಡಿಸೋಜಾ, ಸುಜಾತ, ಸಮೀರ್ ಪಜೀರು, ಅಬ್ದುಲ್ ನಾಸೀರ್ ನಡುಪದವು, ಜಲೀಲ್ ಮೋಂಟುಗೋಲಿ, ನವೀನ್ ಶೆಟ್ಟಿ, ಪ್ರದೀಪ್ ಆಳ್ವ, ಕೆ.ಆರ್.ಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪಜೀರು ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ಲೋರಿನಾ ಡಿಸೋಜಾ ಸ್ವಾಗತಿಸಿ,  ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News