×
Ad

ನೋಟು ರದ್ದತಿಯ ಪರಿಣಾಮ ಕೆಟ್ಟದಾಗದು: ಜೇಟ್ಲಿ

Update: 2016-12-29 19:58 IST

ಹೊಸದಿಲ್ಲಿ, ಡಿ.29: ನೋಟು ರದ್ದತಿಯ ಪರಿಣಾಮವು ಊಹಿಸಿದ್ದಷ್ಟು ಕೆಟ್ಟದಾಗಲಿಲ್ಲ ಎಂದಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ತೆರಿಗೆ ಸಂಗ್ರಹ ಹಾಗೂ ಚಳಿಗಾಲದ ಬೆಳೆಗಳ ಬಿತ್ತನೆ ಸಹಿತ ಆರ್ಥಿಕ ಚಟುವಟಿಕೆಗಳಲ್ಲಿ ಭಾರೀ ಜಿಗಿತವುಂಟಾಗಿದೆ ಎಂದಿದ್ದಾರೆ. ಈ ಮೂಲಕ ಅವರು ಟೀಕೆಗಳನ್ನು ಬದಿಗೆ ತಳ್ಳಿದ್ದಾರೆ.

ಹೊಸ ನೋಟು ಚಲಾವಣೆ ಪ್ರಕ್ರಿಯೆ ಗಮನಾರ್ಹವಾಗಿ ಮುಂದುವರಿದಿದೆ. ದೇಶದ ಯಾವುದೇ ಕಡೆಯಲ್ಲಿ ಅಶಾಂತಿಯ ಒಂದೇ ಒಂದು ಘಟನೆಯೂ ನಡೆದಿಲ್ಲ ಎಂದು ಜೇಟ್ಲಿ ಪ್ರತಿಪಾದಿಸಿದ್ದಾರೆ.

ಪಿಟಿಐಯೊಂದಿಗೆ ಮಾತನಾಡಿದ ಅವರು ಆದಾಗ್ಯೂ, ವರ್ಷದ ಜಿಡಿಪಿ ಬೆಳವಣಿಗೆಯನ್ನು ಅಥವಾ ಹೆಚ್ಚಿರುವ ಕಂದಾಯ ಸಂಗ್ರಹದ ಹಿನ್ನೆಲೆಯಲ್ಲಿ 2017-18ರ ಅವರ ಬಜೆಟ್‌ನಲ್ಲಿ ತೆರಿಗೆ ಪ್ರಸ್ತಾವಗಳ ಮೇಲೆ ಸಂಭಾವ್ಯ ಪರಿಣಾಮವನ್ನು ಊಹಿಸಲು ನಿರಾಕರಿಸಿದ್ದಾರೆ.

 ನಗದು ಹಿಂದೆಗೆತ ನಿರ್ಬಂಧ ಯಾವಾಗ ಸಡಿಲವಾಗಬಹುದೆಂಬ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಆ ಬಗ್ಗೆ ರಿಸರ್ವ್ ಬ್ಯಾಂಕ್ ಪ್ರತಿಯೊಬ್ಬರೊಂದಿಗೂ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.

ನೋಟು ರದ್ದತಿ ನಿರ್ಧಾರವು ಆರ್ಥಿಕತೆ ಹಾಗೂ ಜಿಡಿಪಿ ಬೆಳವಣಿಗೆಗೆ ಮಾರಕವಾಗಲಿದೆಯೆಂಬ ಟೀಕಾಕಾರರ ಭೀತಿಯ ಕುರಿತಾದ ಪ್ರಶ್ನೆಗೆ, ಒಂದಂತೂ ಸ್ಪಷ್ಟ. ಒಂದು ತ್ರೈಮಾಸಿಕದಷ್ಟು ಸಾಲ ಸ್ವಲ್ಪ ವಿರುದ್ಧ ಪರಿಣಾಮ ಉಂಟಾಗಬಹುದು. ಆದರೆ, ಅದು ಊಹಿಸಿದಷ್ಟು ವಿರುದ್ಧವಾಗಿರುವುದೆಂದು ತೋರುವುದಿಲ್ಲವೆಂದು ಜೇಟ್ಲಿ ಉತ್ತರಿಸಿದ್ದಾರೆ.

ಆದರೆ, ದೀರ್ಘಾವಧಿಯಲ್ಲಿ ವ್ಯವಸ್ಥೆಯಲಾಗುತ್ತಿರುವ ಬದಲಾವಣೆಗಳು ಖಂಡಿತವಾಗಿಯೂ ಬ್ಯಾಂಕ್‌ಗಳಲ್ಲಿ ಹೆಚ್ಚು ಹಣ, ಕಂದಾಯದಲ್ಲಿ ಹೆಚ್ಚು ಹಣ ಹಾಗೂ ಬಹುಶಃ ಹೆಚ್ಚು ದೊಡ್ಡ ಮತ್ತು ಸ್ವಚ್ಛ ಜಿಡಿಪಿಯ ಫಲ ನೀಡಲಿವೆಯೆಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News