ಸೊತ್ತುಗಳ ಸಹಿತ ಸುಲಿಗೆಕೋರರ ಸೆರೆ
ಮುಲ್ಕಿ, ಡಿ.29: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಪದ್ಮನ್ನೂರು ಎಂಬಲ್ಲಿ ಕಳೆದ ದಿನಗಳ ಹಿಂದೆ ಚಿಂದಾನಂದ ಉರ್ವಸ್ಟೋರ್ ಮತ್ತಿತರರನ್ನು ಸುಲಿಗೆ ಮಾಡಿದ 8 ಮಂದಿ ಆರೋಪಿಗಳನ್ನು ಸುಲಿಗೆಗೆ ಬಳಸಿದ ಸೊತ್ತುಗಳ ಸಹಿತ ಮುಲ್ಕಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಿವಾಸಿಗಳಾದ ಶಿವಪ್ರಸಾದ ಯಾನೆ ಆಲಿಯಾಸ್ ಅಯ್ಯಪ್ಪ(25), ಸುಧೀರ್(22), ಸಂದೀಪ್(23), ಕಾರ್ತಿಕ್(22), ಬಜಪೆ ಕತ್ತಾಲ್‌ಸಾರ್ ಗೋಲಿಪಲ್ಕೆ ನಿವಾಸಿ ಗೋಪಾಲಗೌಡ(34), ಪಡುಬಿದ್ರೆ ಎಸ್‌ಎಸ್ ಬಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುವಿನ್ ಕಾಂಚನ್(20), ತೆಂಕ ಎರ್ಮಾಳಿನ ವರುಣ್ ಕುಮಾರ್(25), ಕಿನ್ನಿಗೋಳಿಯ ಮೆನ್ನಬೆಟ್ಟು ಗ್ರಾಮದ ಕೊಡೆತ್ತೂರು ನಿವಾಸಿ ಸುಜಿತ್ ಶೆಟ್ಟಿ(28) ಎಂದು ಗುರುತಿಸಲಾಗಿದೆ.
ಅಲ್ಲದೆ, ಅವರು ಡಕಾಯಿತಿಗೆ ಬಳಸಿದ್ದ ವಸ್ತಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿ.23ರಂದು ಮಂಗಳೂರಿನ ಉರ್ವಸ್ಟೋರ್ ನಿವಾಸಿ ಚಿದಾನಂದ ಎಂಬವರು ಕಾರಿನಲ್ಲಿ ಕಿನ್ನಿಗೋಳಿ ಸಮೀಪದ ಬಲವಿನಗುಡ್ಡೆ ಬಳಿ ಬರುತ್ತಿರುವಾಗ ಸುಮಾರು ಏಳೆಂಟು ಜನ ಡಕಾಯಿತರು ಮಾರಕಾಯುಧಗಳಿಂದ ಕಾರನ್ನು ನಿಲ್ಲಿಸಿ ಚಿದಾನಂದರವರಿಂದ ಸುಮಾರು 2 ಲಕ್ಷ ರೂ. ಸುಲಿಗೆ ಮಾಡಿದ್ದರು.
ಈ ಬಗ್ಗೆ ಚಿದಾನಂದ ಅವರು ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.