ಎಟ್ಟಿಕುಳಂನಲ್ಲಿ ಉಳ್ಳಾಲ ತಂಙಳ್ ಉರೂಸ್
ಮಂಗಳೂರು, ಡಿ. 29: ಎಟ್ಟಿಕುಳಂನಲ್ಲಿ ನಡೆಯುತ್ತಿರುವ ತಾಜುಲ್ ಉಲಮಾ ಉಳ್ಳಾಲ ತಂಙಳ್‌ರ ಮೂರನೆ ಉರೂಸ್ ಕಾರ್ಯಕ್ರಮವು ಎಟ್ಟಿಕುಳಂನ ತಾಜುಲ್ ಉಲಮಾ ನಗರದಲ್ಲಿ ಗುರುವಾರ ನಡೆಯಿತು. ಸಮಸ್ತ ಕೇಂದ್ರ ಮುಶಾವರದ ಸದಸ್ಯ ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್ ಮಾತುಲ್ ವಹಿಸಿದ್ದರು.
ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಸಯ್ಯದ್ ಇಂಬಿಚ್ಟಿ ಕೋಯ ತಂಙಳ್ ಅಲ್‌ಬುಖಾರಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ಸಯ್ಯದ್ ಜುನೈದ್ ಅಲ್ ಬುಖಾರಿ, ಸಯ್ಯದ್ ಮಸೂದ್ ಅಲ್ ಬುಖಾರಿ, ಟಿ.ಕೆ.ಅಬೂಬಕರ್ ಮೌಲವಿ, ಅಬ್ದುಲ್ಲತೀಫ್ ಸಅದಿ ಪಯಶ್ರೀ, ಪಲ್ಲಂಕೋಡ್ ಅಬ್ದುಲ್‌ಖಾದರ್ ಮದನಿ, ಮಜೀದ್ ಹಾಜಿ ಉಚ್ಚಿಲ, ಸಯ್ಯದ್ ಬಾಫಕ್ಕಿ ತಂಙಳ್, ಯೂಸುಫ್ ಹಾಜಿ ಪೆರಂಬ ಮಾತನಾಡಿದರು.
ಎಂ.ಪಿ.ಪಿ.ಇಸ್ಮಾಯೀಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಹಿಯುದ್ದೀನ್ ಸಖಾಫಿ ವಂದಿಸಿದರು.
ಶುಕ್ರವಾರ ಅಸರ್ ನಮಾಝಿನ ಬಳಿಕ ಬದ್ರ್ ಮೌಲೂದ್ ನಡೆಯಲಿದೆ. ಸಯ್ಯದ್ ಆಟೋಕೋಯ ತಂಙಳ್ ತಲಿ ಪರಂಬು
7 ಗಂಟೆಗೆ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಶಾಫಿ ಸಖಾಫಿ ಮುಂಡಂಬರ ಉಪನ್ಯಾಸ ನೀಡಲಿದ್ದಾರೆ. ಶನಿವಾರ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಅವರು ಉಪನ್ಯಾಸ ನೀಡಲಿದ್ದಾರೆ.