×
Ad

ಜೆಪ್ಪು-ಮುಳಿಹಿತ್ಲು ರಸ್ತೆ ಸಂಚಾರ ಮಾರ್ಪಾಡು

Update: 2016-12-29 23:18 IST

ಮಂಗಳೂರು, ಡಿ.29: ಮುಳಿಹಿತ್ಲು ಜಂಕ್ಷನ್‌ನಿಂದ ಮಾರ್ಕೆಟ್‌ವರೆಗೆ ರಸ್ತೆ ಕಾಂಕ್ರಿಟ್ ಕಾಮಗಾರಿ ಸಂದರ್ಭ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮೋರ್ಗನ್ಸ್ ಗೇಟ್ ಕಡೆಯಿಂದ ಭಗಿನಿ ಸಮಾಜ ರಸ್ತೆಯ ಮೂಲಕ ಜೆಪ್ಪುಮಾರ್ಕೆಟ್ ರಸ್ತೆಯಾಗಿ ಮುಳಿಹಿತ್ಲು ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಕಾಶಿಯಾ ಜಂಕ್ಷನ್ ಮೂಲಕ ಮಂಗಳಾದೇವಿ ದೇವಸ್ಥಾನದ ಎದುರು ಎಡಕ್ಕೆ ತಿರುಗಿ ಬೋಳಾರಕ್ಕೆ ಬಂದು ಮುಂದೆ ಸಾಗಬೇಕು ಅಥವಾ ಮಂಗಳಾದೇವಿ ದೇವಸ್ಥಾನದ ಬಳಿ ಬಲಕ್ಕೆ ತಿರುಗಿ ಎಮ್ಮೆಕೆರೆ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ ಅಲ್ಲಿಂದ ಬೋಳಾರಕ್ಕೆ ಬಂದು ಮುಂದಕ್ಕೆ ಸಂಚರಿಸಬೇಕು.

ಮುಳಿಹಿತ್ಲು ಜಂಕ್ಷನ್‌ನಿಂದ ಜೆಪ್ಪುಮಾರ್ಕೆಟ್ ಕಡೆಗೆ ಸಂಚರಿಸುವ ವಾಹನಗಳು ಮುಳಿಹಿತ್ಲು ಜಂಕ್ಷನ್‌ನಿಂದ ಮಂಗಳಾದೇವಿ ದೇವಸ್ಥಾನದ ಎದುರಿನಿಂದ ಬಲಕ್ಕೆ ತಿರುಗಿ ಕಾಶಿಯಾ ಜಂಕ್ಷನ್ ಮೂಲಕ ಮುಂದಕ್ಕೆ ಸಂಚರಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News