ಮೂಡುಬಿದಿರೆ: ಟೈಲರ್ ಅಂಗಡಿಗೆ ಬೆಂಕಿ
Update: 2016-12-30 12:39 IST
ಮೂಡುಬಿದಿರೆ, ಡಿ.30: ಇಲ್ಲಿನ ಇರುವೈಲು ರಸ್ತೆಯಲ್ಲಿರುವ ಟೈಲರ್ ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿ ಘಟನೆ ನಡೆದಿದೆ.
ಇರುವೈಲು ರಸ್ತೆಯಲ್ಲಿರುವ ರವಿ ಎಲ್. ಸುವರ್ಣ ಎಂಬವರಿಗೆ ಸೇರಿದ ನಿರ್ಮಲ ಟೈಲರ್ ಅಂಗಡಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿದ್ದ 5 ಟೈಲರಿಂಗ್ ಯಂತ್ರಗಳು, ಹಾಗೂ ಇತರ ಬಟ್ಟೆಗಳು ಬೆಂಕಿಗಾಹುತಿಯಾಗಿದ್ದು, ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅವಘಡ ಸಂಭವಿಸಿರಬಹುದೆಂದು ಹೇಳಲಾಗಿದೆ. ಅಲ್ಲಿಗೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.