×
Ad

ಭಟ್ಕಳ: ವಿಶ್ವಮಾನವ ದಿನಾಚರಣೆ

Update: 2016-12-30 16:01 IST

ಭಟ್ಕಳ, ಡಿ.30: ಕುವೆಂಪು ಜನ್ಮದಿನೋತ್ಸವ ಅಂಗವಾಗಿ ಭಟ್ಕಳ ತಾಲೂಕು ಸಮಿತಿ ವತಿಯಿಂದ ವಿಶ್ವಮಾನವ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಸಹಾಯಕ ಕಮಿಶನರ್ ಮಂಜುನಾಥ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪುರವರ ಮನುಜಮತ ವಿಶ್ವಪಥ ಸಂದೇಶವು ಸಾರ್ವಕಾಲಿಕ ಅನುಸರಣ ಯೋಗ್ಯವಾದ ಮೌಲ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ವಹಿಸಿ ಮಾತನಾಡಿದ ಅವರು, ಮಾನವತಯೇ ಕುವೆಂಪುರವರು ಜಗತ್ತಿಗೆ ನೀಡಿದ ಸಂದೇಶವಾಗಿದೆ. ಜಾತಿ ಮತಗಳನ್ನು ಮೀರಿ ಬೆಳೆದಾಗ ಮಾತ್ರ ಸಾರ್ಥಕ ಬದುಕು ನಮ್ಮದಾಗುತ್ತದೆ ಎಂದು ಹೇಳಿದರು.

ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಮಲೆನಾಡಿನ ಸಹ್ಯಾದ್ರಿಯ ತಪ್ಪಲಲ್ಲಿ ಬೆಳೆದ ಕುವೆಂಪು  ನಾಡಿನ ಕವಿಯಾಗಿ ವಿಶ್ವದ ಕವಿಯಾಗಿ ಕನ್ನಡಕ್ಕೆ ಜಾಗತಿಕ ಸ್ಥಾನಮಾನ ತಂದುಕೊಟ್ಟರು. ಅವರ ಕಾವ್ಯ ಸಾಮ್ರಾಜ್ಯದ ಆಳವನ್ನು ಅರಿಯಲು ವಿಶ್ವಮಾನವ ಸಂದೇಶವೊಂದೇ ಸಾಕು ಎಂದರಲ್ಲದೇ ಅವರ ವಿಶ್ವಮಾನವ ಗೀತೆಯಾದ ಅನಿಕೇತನ ಕವನವನ್ನು ಹಾಡಿದರು.

ನ್ಯೂ ಇಂಗ್ಲೀಷ್ ಶಾಲೆಯ ಶಿಕ್ಷಕ ಪಾಂಡುರಂಗ ಅಳ್ವೆಗದ್ದೆ  ಕುವೆಂಪುರವರ ಬದುಕು ಜೀವನದೃಷ್ಠಿಯ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ರವಿ, ಲೋಕೋಪಯೋಗಿ ಅಭಿಯಂತರ ಶೇಟ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಎಮ್.ಕೆ.ನಾಯ್ಕ ಸ್ವಾಗತಿಸಿ, ಹಿರಿಯ ಶಿಕ್ಷಕ ಎಮ್.ಎಚ್.ನಾಯ್ಕ ವಂದಿಸಿದರು. ಗಣಪತಿ ಶಿರೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News