×
Ad

ಸಮಾಜ ಬದಲಾವಣೆಗೆ ಪ್ರತಿಯೋರ್ವ ನಾಗರಿಕನು ಶಿಕ್ಷಿತನಾಗಬೇಕು: ಜೆ.ಆರ್.ಲೋಬೋ

Update: 2016-12-30 16:13 IST

ಮಂಗಳೂರು, ಡಿ.30: ಸಮಾಜದಲ್ಲಿ ಬದಲಾವಣೆ ಆಗಬೇಕಿದ್ದರೆ ಪ್ರತಿಯೋರ್ವ ನಾಗರಿಕನೂ ಶಿಕ್ಷಿತನಾಗಬೇಕು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೊಬೋ ಹೇಳಿದರು.

ನಗರದ ಬಜಾಲ್ ಪಕ್ಕಲಡ್ಕದಲ್ಲಿರುವ ಸ್ನೇಹ ಪಬ್ಲಿಕ್ ಶಾಲೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕೆ.ಹರಿನಾಥ್, ಯಾವುದೇ ಲಾಭ ಗಳಿಕೆಯ ಉದ್ದೇಶವಿಲ್ಲದೆ ನಗರದ ಹೊರವಲಯದಲ್ಲಿ ಸ್ನೇಹ ಪಬ್ಲಿಕ್ ಶಾಲೆ ನಿರ್ಮಿಸಿ, ಶೈಕ್ಷಣಿಕ ರಂಗದಲ್ಲಿ ತಮ್ಮದೇ ಆದ ಸೇವೆ ನೀಡುವ ಮೂಲಕ ಸ್ಥಳೀಯವಾಗಿ ತುಂಬಾ ಬದಲಾವಣೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಮುಹಮ್ಮದ್ ಕುಂಞಿ ಇಬ್ರಾಹೀಂ ಸೈಯಿದ್ ಮೆಮೋರಿಯಲ್‌ ನೂತನ ಸಭಾಂಗಣವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮನಪಾ ಕಾರ್ಪೋರೇಟರ್‌ಗಳಾದ ಪ್ರವೀಣ್‌ಚಂದ್ರ ಆಳ್ವ, ಸುಮಯ್ಯ ಅಶ್ರಫ್, ನಝೀರ್ ಅಹ್ಮದ್, ಶಾಲಾ ಸಂಚಾಲಕ ಯೂಸುಫ್ ಪಕ್ಕಲಡ್ಕ, ಶಿಕ್ಷಕ-ರಕ್ಷಕರ ಸಂಘದ ಅಧ್ಯಕ್ಷ ಪಿ.ಬಿ.ಮುಹಮ್ಮದ್, ಉಪಾಧ್ಯಕ್ಷ ಅಬ್ದುಸ್ಸಲಾಂ ಸಿ.ಎಚ್., ಹ್ಯೂಮನ್ ವೆಲ್ಫೇರ್ ಟ್ರಸ್ಟ್‌ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News