×
Ad

ಕರಾವಳಿ ಉತ್ಸವದಲ್ಲಿ ನಾಳೆ

Update: 2016-12-30 17:20 IST

ಮಂಗಳೂರು, ಡಿ.30: ಕದ್ರಿ ಉದ್ಯಾನವನದಲ್ಲಿ ಡಿ.31ರಂದು ಸಂಜೆ.5:30 ರಿಂದ 7 ಗಂಟೆಯವರೆಗೆ ಉಸ್ತಾದ್ ರಾಯೀಸ್ ಖಾನ್ ಪುಣೆ ಮತ್ತು ಉಸ್ತಾದ್ ಹಫೀಝ್ ಖಾನ್ ಬೆಂಗಳೂರು ಇವರಿಂದ ದಾಸವಾಣಿ, ಸಂಜೆ 7 ರಿಂದ 7:30 ಗಂಟೆಯವರೆಗೆ ಏಷಿಯಾ ಗಾಟ್ ಟ್ಯಾಲೆಂಟ್ ಖ್ಯಾತಿಯ ವಿಲಾಸ್ ನಾಯಕ್‌ರಿಂದ ಸಂಗೀತ ಚಿತ್ರ, ಸಂಜೆ 7:30ರಿಂದ 9:15ಗಂಟೆಯವರೆಗೆ ತ್ರಿಚ್ಚಿ ಆರ್. ತಾಯುಮನವನ್ ಮತ್ತು ತಂಡದಿಂದ ಸ್ಪರಾಲಯ ಸಂಗಮಮ್ ತಾಳವಾದ್ಯಮ್ ಕಾರ್ಯಕ್ರಮ ನಡೆಯಲಿದೆ.

ವಸ್ತು ಪ್ರದರ್ಶನ ವೇದಿಕೆಯಲ್ಲಿ ಸಂಜೆ 6ರಿಂದ 7:30 ಗಂಟೆಯವರೆಗೆ ಗೀತಾ ಸರಳಾಯ ನಿರ್ದೇಶನದ ನೃತ್ಯ ಭಾರತಿ ಕದ್ರಿ ಮಂಗಳೂರು ಇವರಿಂದ ಕೃಷ್ಣಾ ಂತರಂಗ ನೃತ್ಯ ರೂಪಕ, ಸಂಜೆ 7:30ರಿಂದ 9 ಗಂಟೆಯವರೆಗೆ ಸ್ವರೂಪ ಅಧ್ಯಯನ ಕೇಂದ್ರ ಮಂಗಳೂರು ಇವರಿಂದ ಸ್ವ-ರೂಪ ಮೇಕಪ್ ನಾಟಕ, ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಪುರುಷರ ಮುಕ್ತ ಹಾಕಿ ಪಂದ್ಯಾಟ ಕರಾವಳಿ ಮೈದಾನದಲ್ಲಿ ನಡೆಯಲಿದೆ.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News