ಬಂಟಮಲೆ ಕಾಡಿನ ಶಾಲೆಯಲ್ಲಿ ಕುವೆಂಪು ಜನ್ಮ ದಿನಾಚರಣೆ

Update: 2016-12-30 13:24 GMT

ಸುಳ್ಯ , ಡಿ.30 : ಐತಿಹಾಸಿಕ ಸತ್ಯಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇದ್ದಾಗ ಮಾತ್ರ ಸಾಮಾಜಿಕ ಶೋಷಣೆಯಿಂದ ಮುಕ್ತರಾಗಲು ಸಾಧ್ಯ ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.

 ಗುತ್ತಿಗಾರು ಬಳಿಯ ಬಂಟಮಲೆ ಕಾಡಿನ ಶಾಲೆಯಲ್ಲಿ ನಡೆದ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಹಿರಿಯ ರಾಜಕೀಯ ಧುರೀಣ ಎ.ಕೆ. ಸುಬ್ಬಯ್ಯರವರಿಗೆ ಕುವೆಂಪು ಬಂಟಮಲೆ ಪ್ರಶಸ್ತಿ ನೀಡಿ ಮಾತನಾಡಿದರು.

ನಾವು ಪೂಜಿಸುತ್ತಿರುವ ಎಲ್ಲ ದೇವರು ಐತಿಹಾಸಿಕ ವ್ಯಕ್ತಿಗಳು. ಈ ತಿಳುವಳಿಕೆ ನಮಗೆ ಬೇಕು. ಸಾಮಾಜಿಕ ಅನಿಷ್ಟಗಳ ವಿರುದ್ದ ಸಾತ್ವಿಕ ಶಕ್ತಿಗಳು ಒಂದಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಶಿಕ್ಷಣ ತಜ್ಞ ಡಾ ಎನ್. ಸುಕುಮಾರ ಗೌಡ ಉದ್ಘಾಟಿಸಿದರು.

ಸಭಾಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭರತ್ ಮುಂಡೋಡಿ ವಹಿಸಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎ.ಕೆ. ಸುಬ್ಬಯ್ಯರವರು, ಭ್ರಷ್ಟಾಚಾರಕ್ಕಿಂತಲೂ ಕೋಮುವಾದ ಅಪಾಯಕಾರಿ. ಅದಕ್ಕಿಂತಲೂ ಅಪಾಯಕಾರಿ ಮೌಢ್ಯ .  ಮೂಢ ನಂಬಿಕೆಯಿಂದಲೇ ಜನರನ್ನು ಕಟ್ಟಿ ಹಾಕುವ ವ್ಯವಸ್ಥೆ ರೂಪುಗೊಂಡಿದೆ. ಆದರೆ ತಿಳುವಳಿಕೆಯ ಜ್ಞಾನಜ್ಯೋತಿಯ ಮಂದೆ ಮೂಢನಂಬಿಕೆ ಉಳಿಯಲಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News