×
Ad

ಟೈಲರಿಂಗ್ ಅಂಗಡಿಗೆ ಬೆಂಕಿ: 5 ಲಕ್ಷ ರೂ. ನಷ್ಟ

Update: 2016-12-30 19:27 IST

ಮೂಡುಬಿದಿರೆ , ಡಿ.30  : ಇಲ್ಲಿನ ಇರುವೈಲು ರಸ್ತೆಯಲ್ಲಿರುವ ಟೈಲರ್ ಅಂಗಡಿಯೊಂದಕ್ಕೆ  ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸುಮಾರು 5 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹ್ಮತಿಯಾದ ಘಟನೆ ನಡೆದಿದೆ.

ರವಿ ಎಲ್. ಸುವರ್ಣ ಎಂಬವರಿಗೆ ಸೇರಿದ ನಿರ್ಮಲ ಟೈಲರ್ ಅಂಗಡಿಯಲ್ಲಿ ಮದುವೆ ಸಮಾರಂಭವೊಂದಕ್ಕೆ ತುರ್ತಾಗಿ ಕೊಡಬೇಕಿದ್ದ 1 ಲಕ್ಷ ರೂ. ಮೌಲ್ಯದ ಬಟ್ಟೆಗಳಿತ್ತು. ಈ ಬಟ್ಟೆಗಳು ಸೇರಿದಂತೆ 5 ಟೈಲರಿಂಗ್ ಯಂತ್ರಗಳು, ಹಾಗೂ ಇತರ ಬಟ್ಟೆಗಳು ಸೇರಿ ಒಟ್ಟು ನಷ್ಟ 5ಲಕ್ಷ ಉಂಟಾಗಿದೆ. ಅಂಗಡಿ ಭಾಗಶಃ ಸುಟ್ಟು ಕರಕಲಾಗಿದೆ.

ಬೆಳಗಿನ ಸಮಯ ಟೈಲರ್ ಶಾಪ್‌ಗೆ ಬೆಂಕಿ ಹೊತ್ತಿದ್ದನ್ನು ಗಮನಿಸಿದ ಅಯ್ಯಪ್ಪ ವೃತಧಾರಿಗಳು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಶಾಸಕ ಅಭಯಚಂದ್ರ ಜೈನ್, ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪ್ರಭು, ಪುರಸಭಾ ಸದಸ್ಯ ಲಕ್ಷ್ಮಣ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಅಧಿಕಾರಿ, ಆಟೋ ಯೂನಿಯನ್‌ನ ಭಾಸ್ಕರ ಆಚಾರ್ಯ, ಮೂಡುಬಿದಿರೆ ವಿಧಾನ ಸಭಾ ಜೆಡಿಎಸ್ ಅಶ್ವಿನ್ ಜೊಸ್ಸಿ ಪಿರೇರಾ ಭೇಟಿ ನೀಡಿ ಅಂಗಡಿ ಮಾಲಕ ರವಿ ಅವರಿಗೆ ಸಾಂತ್ವನ ನೀಡಿ ಸಹಾಯದ ಭರವಸೆ ಕೊಟ್ಟಿದ್ದಾರೆ.

ಟೈಲರಿಂಗ್ ಅಸೋಸಿಯೇಶನ್‌ ಮಾಜಿ ಕಾರ್ಯದರ್ಶಿ, ಪುರಸಭಾ ಸದಸ್ಯ ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News