ಟಿಪ್ಪರ್ - ಆ್ಯಕ್ಟಿವಾ ಢಿಕ್ಕಿ: ಸವಾರರಿಗೆ ಗಾಯ
Update: 2016-12-30 19:41 IST
ಕಡಬ, ಡಿ.30. ಠಾಣಾ ವ್ಯಾಪ್ತಿಯ ಗೋಳಿತ್ತಡಿ ಎಂಬಲ್ಲಿ ಟಿಪ್ಪರ್ ಹಾಗೂ ಆ್ಯಕ್ಟಿವಾ ನಡುವೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಗಾಯಾಳುಗಳನ್ನು ಸವಾರ ಶಾಹಿದ್(20) ಮತ್ತು ಸಹಸವಾರ ಅಬೂಬಕ್ಕರ್(45) ಎಂದು ಗುರುತಿಸಲಾಗಿದೆ.
ಆಲಂಕಾರು ಕಡೆಯಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಆ್ಯಕ್ಟಿವಾ ಮತ್ತು ರಸ್ತೆ ಅಗಲೀಕರಣ ಕಾಮಗಾರಿಯ ಟಿಪ್ಪರ್ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.