×
Ad

ಉಡುಪಿ : ಸೌರಶಕ್ತಿ ಉಪಕರಣ ಮತ್ತು ಸಾಲ ನೀಡುವಿಕೆ ಮಾಹಿತಿ ಶಿಬಿರ

Update: 2016-12-30 19:58 IST

ಉಡುಪಿ, ಡಿ.30: ಭಾರತದಲ್ಲಿ ಶೇ.60ರಷ್ಟು ಮನೆಗಳಿಗೆ ವಿದ್ಯುತ್ ಇಲ್ಲ. ಸುಮಾರು 1.18ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವುದೇ ಕಷ್ಟ. ಇದಕ್ಕೆಲ್ಲ ಪರಿಹಾರ ಸೋಲಾರ್ ವಿದ್ಯುತ್‌ನಲ್ಲಿದೆ. ಇದಕ್ಕೆ ಹೆಚ್ಚಿನ ಮಹತ್ವ ನೀಡುವುದು ಹಾಗೂ ಅದಕ್ಕೆ ಸಾಲ ಕೊಡುವ ವ್ಯವಸ್ಥೆ ಆಗಬೇಕಾಗಿದೆ ಎಂದು ಭಾರತೀಯ ವಿಕಾಸ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆಲ್ಕೋ ಫೌಂಡೇಶನ್ ಯೋಜನೆಯಡಿಯಲ್ಲಿ ಉಡುಪಿ ಹಾಗೂ ಕಾರ್ಕಳ ತಾಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘ ಗಳ/ಕ್ರೆಡಿಟ್ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಶುಕ್ರವಾರ ಅಜ್ಜಕರಾಡು ಪುರಭವನದ ಮಿನಿ ಸಭಾಂಗಣದಲ್ಲಿ ಆಯೋಜಿಸಲಾದ ಸೌರಶಕ್ತಿ ಉಪಕರಣ ಮತ್ತು ಸಾಲ ನೀಡುವಿಕೆ ಹಾಗೂ ವ್ಯವಹಾರ ಅಭಿವೃದ್ಧಿ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿ, ಸಹಕಾರಿ ಸಂಘಗಳು ಆರಂಭದ ದಿನಗಳಲ್ಲಿ ಅನುಭವಿಸಿದ ತೊಂದರೆಗಳಿಗಿಂತ ಈಗ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿವೆ. ಇದಕ್ಕೆ ಕಾರಣ ಹಣ ಹರಿದು ಬರದೆ ಇರುವುದು. ಆದರೂ ಇಂದು ಸಹಕಾರಿ ಕ್ಷೇತ್ರ ಸುಭದ್ರವಾಗಿದೆ. ಸಹಕಾರಿ ನಿಯಮಗಳನ್ನು ಎಂದಿಗೂ ನಾವು ಉಲ್ಲಂಘಿಸುವುದಿಲ್ಲ. ಸಾಮಾಜಿಕ ಬದ್ಧತೆಯ ದೃಷ್ಠಿಯಿಂದ ಸೌರಶಕ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಎಸ್‌ಸಿಡಿಸಿಸಿ ಬ್ಯಾಂಕಿನ ನಿವೃತ್ತ ಆಡಳಿತ ನಿರ್ದೇಶಕ ವಿಶ್ವನಾಥ್ ನಾಯರ್, ಯೂನಿಯನ್‌ನ ನಿರ್ದೇಶಕರಾದ ವೈ.ಸುಧೀರ್, ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಬಿ.ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News