×
Ad

ಚೀನಾ, ನೇಪಾಳದ ಪ್ರಥಮ ಜಂಟಿ ಸೇನಾಭ್ಯಾಸ

Update: 2016-12-30 22:22 IST

ಕಠ್ಮಂಡು, ಡಿ. 30: ನೇಪಾಳ ಮತ್ತು ಚೀನಾಗಳು ಫೆಬ್ರವರಿ ತಿಂಗಳ ಆದಿ ಭಾಗದಲ್ಲಿ ತಮ್ಮ ಪ್ರಥಮ ಜಂಟಿ ಸೇನಾಭ್ಯಾಸ ನಡೆಸಲಿವೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಮತ್ತು ವಿಪತ್ತು ನಿರ್ವಹಣೆಗೆ ಸೇನಾಭ್ಯಾಸವು ಮಹತ್ವ ನೀಡಲಿದೆ ಎನ್ನಲಾಗಿದೆ.
ಆದಾಗ್ಯೂ, ಈ ಕ್ರಮವು ಭಾರತದಲ್ಲಿ ಕಳವಳಕ್ಕೆ ಕಾರಣವಾಗಬಹುದಾಗಿದೆ.

ಸೇನಾಭ್ಯಾಸ ನಡೆಸುವ ವಿಷಯದಲ್ಲಿ ಚೀನಾ ಮತ್ತು ನೇಪಾಳಗಳು ಆರಂಭಿಕ ಸುತ್ತಿನ ಮಾತುಕತೆಗಳಲ್ಲಿ ತೊಡಗಿವೆ ಹಾಗೂ ಇದರ ವಿವರಗಳನ್ನು ಬಳಿಕ ಪ್ರಕಟಿಸಲಾಗುವುದು ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಯಾಂಗ್ ಯುಜುನ್ ಗುರುವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News