ಚೀನಾದಿಂದ ಪಾಕ್‌ನಲ್ಲಿ 10,200 ಕೋಟಿ ರೂ. ವೆಚ್ಚದ ವಿದ್ಯುತ್ ಮಾರ್ಗ
Update: 2016-12-30 22:28 IST
ಇಸ್ಲಾಮಾಬಾದ್, ಡಿ. 30: ಪಾಕಿಸ್ತಾನದ ಉತ್ತರದಿಂದ ದಕ್ಷಿಣಕ್ಕೆ 4,000 ಮೆಗಾವಾಟ್ ವಿದ್ಯುತ್ತನ್ನು ಸಾಗಿಸಲು ಆ ದೇಶದ ಉದ್ದಕ್ಕೆ 150 ಕೋಟಿ ಡಾಲರ್ (ಸುಮಾರು 10,200 ಕೋಟಿ ರೂಪಾಯಿ) ವೆಚ್ಚದಲ್ಲಿ ವಿದ್ಯುತ್ ಮಾರ್ಗ ನಿರ್ಮಿಸಲು ಚೀನಾದ ಸರಕಾರಿ ವಿದ್ಯುತ್ ನಿಗಮ ಮುಂದಾಗಿದೆ.
ಪಾಕಿಸ್ತಾನದ ಮೊದಲ ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ (ಎಚ್‌ವಿಡಿಸಿ) ಮಾರ್ಗ ನಿರ್ಮಿಸಲು ಪಾಕಿಸ್ತಾನ ಮತ್ತು ಚೀನಾದ ಅಧಿಕಾರಿಗಳು ಗುರುವಾರ ಬೀಜಿಂಗ್‌ನಲ್ಲಿ ಹೂಡಿಕೆ ಒಪ್ಪಂದವೊಂದಕ್ಕೆ ಸಹಿ ಹಾಕಿದವು ಎಂದು ಸರಕಾರಿ ಹೇಳಿಕೆಯೊಂದು ತಿಳಿಸಿದೆ.