ಫೆಲೆಸ್ತೀನ್-ಇಸ್ರೇಲ್: 2-ದೇಶ ಪರಿಹಾರಕ್ಕೆ ಐರೋಪ್ಯ ಒಕ್ಕೂಟ ಬೆಂಬಲ
Update: 2016-12-30 22:32 IST
ಬ್ರಸೆಲ್ಸ್, ಡಿ. 30: ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳ ನಡುವೆ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಎರಡು ರಾಷ್ಟ್ರಗಳ ನಿರ್ಮಾಣವೇ ಶ್ರೇಷ್ಠ ಪರಿಹಾರ ಎಂಬ ಅಮೆರಿಕದ ನಿಲುವಿಗೆ ಐರೋಪ್ಯ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
ಫೆಲೆಸ್ತೀನ್ ನೆಲದಲ್ಲಿ ವಸಾಹತನ್ನು ನಿರ್ಮಿಸಿರುವುದಕ್ಕಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಇಸ್ರೇಲನ್ನು ತರಾಟೆಗೆ ತೆಗೆದುಕೊಂಡ ಒಂದು ದಿನದ ಬಳಿಕ 28 ದೇಶಗಳ ಒಕ್ಕೂಟದ ವಕ್ತಾರೆಯೊಬ್ಬರು ಎರಡು ದೇಶಗಳ ಪರಿಹಾರಕ್ಕೆ ಐರೋಪ್ಯ ಒಕ್ಕೂಟದ ನಿಲುವನ್ನು ಪುನರುಚ್ಚರಿಸಿದರು.