×
Ad

‘ಸೇವರಿ ರೆಸ್ಟೋರೆಂಟ್’ ಸಿಟಿ ಸೆಂಟರ್‌ನಲ್ಲಿ ಉದ್ಘಾಟನೆ

Update: 2016-12-30 22:57 IST

ಮಂಗಳೂರು, ಡಿ.28: ಅರೆಬಿಕ್ ಶೈಲಿಯ, ಉತ್ತರ-ದಕ್ಷಿಣ ಭಾರತೀಯ ಹಾಗೂ ಚೈನೀಸ್ ಮಾದರಿಯ ‘ಸೇವರಿ ರೆಸ್ಟೋರೆಂಟ್’ ಇಂದು ನಗರದ ಸಿಟಿ ಸೆಂಟರ್‌ನ ನೆಲಮಹಡಿಯಲ್ಲಿ ಉದ್ಘಾಟನೆಗೊಂಡಿತು.

‘ಸೇವರಿ ರೆಸ್ಟೋರೆಂಟ್’ನ್ನು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.

ರೆಸ್ಟೋರೆಂಟ್‌ನ ಪ್ರಮುಖ ಪ್ರವೇಶ ದ್ವಾರದ ಉದ್ಘಾಟನೆಯನ್ನು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವ ನೆರವೇರಿಸಿದರು.

ಅಡುಗೆ ಕೋಣೆಯನ್ನು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ‘ಸೇವರಿ’ಯ ಸ್ಫಾಪಕ ಅಧ್ಯಕ್ಷ ಕುಂಞಿಮೂಸಾ, ಸೇವರಿ ರೆಸ್ಟೋರೆಂಟ್‌ನ ಪಾಲುದಾರ ಮುಹಮ್ಮದ್ ಆಸಿಫ್, ಮೊಹ್ತಿಶಾಮ್ ಕಾಂಪ್ಲೆಕ್ಸೆಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ.ಅರ್ಶದ್, ನಿರ್ದೇಶಕ ಎಸ್.ಎಂ.ಸವೂದ್, ಕಾರ್ಪೊರೇಟರ್ ವಿನಯ್‌ರಾಜ್ ಉಪಸ್ಥಿತರಿದ್ದರು.

ಉದ್ಘಾಟನೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಮೊದಿನ್ ಬಾವ, ಉತ್ತರ ಮತ್ತು ದಕ್ಷಿಣ ಭಾರತೀಯ, ಚೈನೀಸ್, ಅರಬಿಕ್ ಹಾಗೂ ಕೇರಳ ಮಾದರಿಯ ಖಾದ್ಯಗಳನ್ನು ಮಂಗಳೂರಿಗೆ ಪರಿಚಯಿಸುವ ‘ಸೇವರಿ’ಯ ಕುಂಞಿ ಮೂಸಾ ಅವರ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಬೆಳೆಯುತ್ತಿರುವ ಮಂಗಳೂರು ನಗರದ ಹೃದಯಭಾಗದಲ್ಲಿ ಉದ್ಘಾಟನೆಗೊಂಡಿರುವ ‘ಸೇವರಿ ರೆಸ್ಟೋರೆಂಟ್’ ಗ್ರಾಹಕರಿಗೆ ನೀಡುವ ಖಾದ್ಯಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲಿ ಎಂದರು.

ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಮಂಗಳೂರಿನ ಜನರು ಸ್ಮಾರ್ಟ್ ಆಗಬೇಕಾದರೆ, ‘ಸೇವರಿ’ಯಂತಹ ರೆಸ್ಟೋರೆಂಟ್ ಅಗತ್ಯವಾಗಿದೆ ಎಂದರು.

ಅರೆಬಿಕ್ ಶೈಲಿಯ ಖಾದ್ಯಗಳಿಗೆ ಹೆಸರುವಾಸಿಯಾಗಿರುವ ‘ಸೇವರಿ’ಯು ಸುಮಾರು 7 ಸಾವಿರ ಚ.ಅ. ವಿಸ್ತೀರ್ಣ ಹೊಂದಿದೆ. ಇಲ್ಲಿ 200ಕ್ಕೂ ಅಧಿಕ ಮಂದಿ ಏಕಕಾಲಕ್ಕೆ ಭೋಜನ ಮಾಡುವವ್ಯವ್ಯವಸ್ಥೆ ಇದೆ. ಸುಮಾರು 100ಕ್ಕೂ ಅಧಿಕ ನುರಿತ ಸಿಬ್ಬಂದಿ ವರ್ಗ ‘ಸೇವರಿ ರೆಸ್ಟೋರೆಂಟ್’ನಲ್ಲಿ ಸೇವೆಗೆ ಲಭ್ಯವಿದ್ದು, ಅರೆಬಿಯನ್, ಕೇರಳ, ಕರ್ನಾಟಕದ ಶೆಫ್‌ಗಳು ಇದ್ದಾರೆ. ಚಿಕನ್, ಮಟನ್ ಹಾಗೂ ಮೀನಿನ ವೈವಿಧ್ಯಮಯ ಖಾದ್ಯಗಳು ‘ಸೇವರಿ’ಯಲ್ಲಿ ಲಭ್ಯವಿವೆ.

2002ರಲ್ಲಿ ಮೊದಲ ಬಾರಿಗೆ ‘ಸೇವರಿ ರೆಸ್ಟೋರೆಂಟ್’ ಅನ್ನು ಬೆಂಗಳೂರಿನ ಜನತೆಗೆ ಪರಿಚಯಿಸಿದರು. ಇದೀಗ ಬೆಂಗಳೂರು ಮತ್ತು ಚೆನ್ನೈಗಳಲ್ಲಿ ತಲಾ 5 ‘ಸೇವರಿ ರೆಸ್ಟೋರೆಂಟ್’ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News