×
Ad

ತಂಡದಿಂದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ: ದೂರು

Update: 2016-12-30 23:08 IST

ಮಂಗಳೂರು, ಡಿ.30: ತಂಡವೊಂದು ವ್ಯಕ್ತಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಶ್‌ನಗರದಲ್ಲಿ ಇಂದು ಮುಂಜಾನೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಸುಭಾಶ್‌ನಗರದ ನಿವಾಸಿ ಮುಹಮ್ಮದ್ ಹನೀಫ್ (45) ಎಂದು ಗುರುತಿಸಲಾಗಿದೆ.

ಮೀನು ವ್ಯಾಪಾರಿಯಾಗಿರುವ ಹನೀಫ್ ಇಂದು ಮುಂಜಾನೆ ಸುಮಾರು 5:30ಕ್ಕೆ ಧಕ್ಕೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಸುಭಾಶ್‌ನಗರದಲ್ಲಿ ಹೆಲ್ಮಟ್ ಧರಿಸಿ ಬೈಕ್‌ನಲ್ಲಿ ಆಗಮಿಸಿದ ಮೂವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News