×
Ad

ಕುಡ್ಲ ಪ್ರಿಮಿಯರ್ ಲೀಗ್ : ವಿಜಯೋತ್ಸವ

Update: 2016-12-30 23:36 IST

 ಮಂಗಳೂರು,ಡಿ.30:  ಫ್ರೆಂಡ್ಸ್ ಉರ್ವ ಸಂಘವು ಉರ್ವ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ‘ಕುಡ್ಲ ಪ್ರಿಮಿಯರ್ ಲೀಗ್’ ಕ್ರಿಕೆಟ್ ಸ್ಪರ್ಧೆಯಲ್ಲಿ ಬಿರುವೆರ್ ಕುಡ್ಲ ತಂಡವು ಪ್ರಥಮ ಬಹುಮಾನ 3 ಲ.ರೂ ಮತ್ತು 50 ಸಾ.ರೂ. ಮೌಲ್ಯದ ಬೃಹತ್ ಟ್ರೋಫಿ ಜಯಸಿತು.

ಈ ಸಂದರ್ಭ ವಿಜಯೋತ್ಸವ ಮೆರವಣಿಗೆ ಮಂಗಳೂರಿನ ಊರ್ವ ಮೈದಾನದಿಂದ ಲಾಲ್‌ಬಾಗ್, ಪಿವಿಎಸ್ ವೃತ್ತದಿಂದ ಸಾಗಿ ಬಲ್ಲಾಳ್‌ಬಾಗ್‌ನಲ್ಲಿ ಸಮಾರೋಪಗೊಂಡಿತು.

ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್‌ಬಾಗ್, ಗೌರವಾಧ್ಯಕ್ಷ ಪ್ರಮೋದ್ ಬಲ್ಲಾಳ್‌ಬಾಗ್, ಅಧ್ಯಕ್ಷ ರಾಕೇಶ್ ಬಲ್ಲಾಳ್‌ಬಾಗ್, ಅಭಿಷೇಕ್ ಅಮೀನ್ ಬಿಕರ್ನಕಟ್ಟೆ, ಯತೀಶ್ ಬಲ್ಲಾಳ್‌ಬಾಗ್, ಸದಾನಂದ ಪೂಜಾರಿ, ರಣ್‌ದೀಪ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News