ನ್ಯಾಯವಾದಿಗೆ ಬೆದರಿಕೆ: ಎಸ್ಸೆ ವಿರುದ್ಧ ಪ್ರಕರಣ

Update: 2016-12-30 18:29 GMT

ಕಾರ್ಕಳ, ಡಿ.30: ನ್ಯಾಯಾಲಯದ ಆವರಣದಲ್ಲಿ ವಕೀಲರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿರುವ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ರಫೀಕ್ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಸಿ ಹರೀಶ್ ಪೂಜಾರಿ ಎಂಬಾತ ಡಿ.14ರಂದು ನ್ಯಾಯಾಲಯಕ್ಕೆ ಶರಣಾಗಿದ್ದು, ಆತನನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆದರೆ ಕಾರ್ಕಳ ಗ್ರಾಮಾಂತರ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಕರೆದುಕೊಂಡು ಹೋಗುವ ಮೊದಲು ನ್ಯಾಯಾಲಯದ ಆದೇಶವನ್ನು ಕ್ಕರಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂಡಿ ಹಾಕಿ, ದೈಹಿಕ ಹಿಂಸೆಯನ್ನು ನೀಡಿದ್ದರು.

ಡಿ.17ರಂದು ಹರೀಶ್ ಪೂಜಾರಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭ ಆರೋಪಿ ಪರ ವಕೀಲ ಬಿ.ಮಣಿರಾಜ ಶೆಟ್ಟಿ ನ್ಯಾಯಾಲಯದ ಎದುರಿನ ಅಂಗಳದಲ್ಲಿ ಪೊಲೀಸರು ನೀಡಿರುವ ಮಾನಸಿಕ ಮತ್ತು ದೈಹಿಕ ಹಿಂಸೆಯ ವಿಚಾರವನ್ನು ನ್ಯಾಯಾಲಯದ ಮುಂದೆ ಹೇಳುವಂತೆ ಹರೀಶ್ ಪೂಜಾರಿಗೆ ಸಲಹೆಯನ್ನು ನೀಡುತ್ತಿದ್ದಾಗ ಉಪ ನಿರೀಕ್ಷಕ ರಫೀಕ್ ವಕೀಲ ಮಣಿರಾಜ ಶೆಟ್ಟಿಯನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News