ಜ. 6,7,8ಕ್ಕೆ ಅಂತರ್ ಜಿಲ್ಲಾ ಹೊನಲುಬೆಳಕಿನ ಕಬಡ್ಡಿ ಪಂದ್ಯಾವಳಿ

Update: 2016-12-31 11:39 GMT

ಭಟ್ಕಳ , ಡಿ. 31 :  ಜ.6,7,8 ರಂದು ಭಟ್ಕಳದ ಸುಲ್ತಾನ್ ಯೂತ್ ವೆಲ್ಫೇರ್ ಅಸೋಶಿಯೇಶನ್ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಿದ್ದು ,  ಟಿಪ್ಪು ಸುಲ್ತಾನ್ ಆಕರ್ಷಕ ಟ್ರೋಫಿ ಸೇರಿದಂತೆ ಲಕ್ಷಕ್ಕೂ ಅಧಿಕ ನಗದು ಬಹುಮಾನ ನೀಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮಿ ಮೆಡಿಕಲ್ ಹೇಳಿದರು.

ಅವರು ಅಸೋಸಿಯೇಶನ್ ಕಾರ್ಯಾಲಯದಲ್ಲಿ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದರು.

ಸುಲ್ತಾನ್ ವೆಲ್ಫೇರ್ ಅಸೋಸಿಯೇಶನ್ ಕಳೆದ 29 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಯಾವುದೇ ಜಾತಿ, ಭಾಷೆ, ಧರ್ಮಭೇದ ಮಾಡದೆ ಎಲ್ಲರಿಗೂ ವೇದಿಕೆಯನ್ನು ನೀಡುತ್ತಿದೆ. ಈಗ ತಾಲೂಕಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕಾಗಿದೆ ಎಂದರು.

ಬೆಂಗಳೂರು, ತುಮಕುರು, ಹಾವೇರಿ, ದಾವಣಗೆರೆ, ಶಿವಮೊಗ್ಗ, ಮಂಗಳುರು, ಉಡುಪಿ, ಕಾರವಾರ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಒಟ್ಟು 20ಕ್ಕೂ ಅಧಿತ ತಂಡಗಳು ಭಾಗವಹಿಸಲಿದ್ದು, ಇವುಗಳಲ್ಲಿ ಪ್ರಮುಖ ಆಕರ್ಷಣೆಯೆಂದರೆ ಪ್ರತಿಷ್ಠಿತ ಪ್ರೋ ಕಬಡ್ಡಿಯ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ 3 ಜನ ಅಂತರ ರಾಜ್ಯ ಕಬಡ್ಡಿ ಆಟಗಾರರು ಈ ಕಬಡ್ಡಿ ಪಂದ್ಯದಲ್ಲಿ ಆಡಬಹುದು ಎಂದು ತಿಳಿಸಿದರು.

ಪಂದ್ಯಾವಳಿಯ ವಿಜೇತ ಪ್ರಥಮ ತಂಡಕ್ಕೆ 55555ರೂ ನಗದು ಹಾಗೂ ಒಂದು ಟ್ರೋಪಿ, ದ್ವೀತಿಯ ತಂಡಕ್ಕೆ 33333ರೂ ನಗದು ಸೇರಿ ಟ್ರೋಪಿ ನೀಡಲಾಗುವುದು.

ಈ ಸಂದರ್ಭದಲ್ಲಿ ಸುಲ್ತಾನ್ ಯೂಥ್ ವೇಲ್ಪೇರ್ ಅಸೋಶಿಯೇಶನ್ ಅಧ್ಯಕ್ಷ ಅಬ್ದುಲ್ ಅಝೀಮ್ ಮೊಹತೆಶಮ್, ಜಂಟಿ ಕಾರ್ಯದರ್ಶೀ ಅಂಬರ್ ಕೋಬಟ್ಟೆ, ಕ್ರೀಡಾ ಕಾರ್ಯದರ್ಶಿ ಮೌಲಾನಾ ಅಬ್ಬೂಬಕ್ಕರ್ ತೋನ್ಸೆ , ಜಿಲ್ಲಾ ಕಬಡ್ಡಿ ಅಸೋಶಿಯೇಶನ್ ಕೋಶಾಧ್ಯಕ್ಷ ರಾಜೇಶ ಮುಂಡಗೋಡ, ಭಟ್ಕಳ ತಾಲೂಕು ಕಬಡ್ಡಿ ಅಸೋಶಿಯೇಶನ್ ಅಧ್ಯಕ್ಷ ಶ್ರೀಧರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News