ಹಿಂದುಸ್ತಾನ್ ಪ್ರಮೋಟರ್ಸ್ & ಡೆವಲಪರ್ಸ್ ಗೆ ಪ್ರಶಸ್ತಿ
ಮಂಗಳೂರು, ಡಿ.31 : ಸರಕಾರಿ- ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ) ಕರ್ನಾಟಕದಲ್ಲೇ ಪ್ರಪ್ರಥಮ ಬಸ್ ಟರ್ಮಿನಲ್ ಪುತ್ತೂರಿನಲ್ಲಿ ನಿರ್ಮಾಣವಾಗಿದ್ದು ಇದನ್ನು ನಿರ್ಮಿಸಿದ ಹಿಂದುಸ್ತಾನ್ ಪ್ರಮೋಟರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಗೆ 2016 ನೇ ಸಾಲಿನ ಎ.ಸಿ.ಸಿ.ಇ ಇಂಡಿಯಾ ಮತ್ತು ಅಲ್ಟ್ರಾಟೆಕ್ ಅವಾರ್ಡ್ ಸಿಕ್ಕಿದೆ.
ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿಂದುಸ್ತಾನ್ ಪ್ರಮೋಟರ್ಸ್ ಮತ್ತು ಡೆವಲಪ್ಪರ್ಸ್ ಸಂಸ್ಥೆಯ ಚೈಯರ್‌ಮಾನ್ ಡಾ.ಮುಹಮ್ಮದ್ ಇಬ್ರಾಹಿಂ ಪಾವೂರು ಪ್ರಶಸ್ತಿ ಸ್ವೀಕರಿಸಿದರು.
ಇಂಡಿಯಾ ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನೀಯರ್ಸ್ ಕನ್‌ಸ್ಟ್ರಕ್ಷನ್ ಅಲ್ಟ್ರಾಟೆಕ್ ಸಂಸ್ಥೆಯು ಈ ಪ್ರಶಸ್ತಿ ನೀಡುತ್ತಿದೆ.
ದ.ಕ , ಉಡುಪಿ , ಚಿಕ್ಕಮಂಗಳೂರು , ಮತ್ತು ಶಿವಮೊಗ್ಗ ವಲಯ ವ್ಯಾಪ್ತಿಯಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಹಿಂದುಸ್ತಾನ್ ಸಂಸ್ಥೆ ಪಡೆದುಕೊಂಡಿದೆ. ಬೆಂಗಳೂರು ವಿಸ್ತಾರ್ ಕನ್ಸಲ್ಟೆನ್ಸಿ ಸಂಸ್ಥೆಯ ಮಂಜರಿ ವಿಲಾಸ್ ಪೂಜಾರಿ , ಆಲ್ಟ್ರಾಟೆಕ್ ಸಂಸ್ಥೆಯ ಝೋನಲ್ ಮುಖ್ಯಸ್ಥ ಎಸ್.ವಿ ಪಾಟೀಲ್ , ಸಿವಿಲ್ ಎಂಜಿನಿಯರಿಂಗ್ ಕನ್ಸಲ್ಟೆನ್ಸಿ ಮಂಗಳೂರು ಬ್ರಾಂಚ್ ಚೆಯರ್‌ಮಾನ್ ಟಿ.ವಿನಾಯಕ ಪೈ , ಮಂಗಳೂರು ಡಿಸೈನ್ ಅಸೋಸಿಯೇಟ್ಸ್ ನ ಆನಂದ ಭಟ್ , ಮಂಗಳೂರು ಕೆ.ಎಸ್.ಆರ್.ಟಿ.ಸಿ ಚೀಫ್ ಎಂಜಿನಿಯರ್ ಜಗದೀಶ್ ಚಂದ್ರ , ಹಿಂದುಸ್ಥಾನ್ ಪ್ರಮೋಟರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಯ ಎಂಜಿನಿಯರ್ ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.