×
Ad

10 ದಿನಗಳಲ್ಲಿ 125 ಮಂದಿ ಸಂಪರ್ಕ

Update: 2016-12-31 23:58 IST

ಮಂಗಳೂರು, ಡಿ.31: ರಜೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಮನೆಯನ್ನು ಬಂದ್ ಮಾಡಿ ಎಲ್ಲಾದರೂ ಹೋಗುವ ಸಂದರ್ಭದಲ್ಲಿ ಅಂತಹವರ ಸುರಕ್ಷತೆಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಅಸ್ತಿತ್ವಕ್ಕೆ ತಂದಿರುವ ಗೃಹ ಸುರಕ್ಷಾ ಆ್ಯಪ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

 ಆ್ಯಪ್‌ಗೆ ಚಾಲನೆ ನೀಡಿದ 10 ದಿನಗಳಲ್ಲಿ 125 ಮಂದಿ ಈ ಮೂಲಕ ಇಲಾಖೆಯನ್ನು ಸಂಪರ್ಕಿಸಿದ್ದಾರೆ ಎಂದು ಅವರು ವಿವರಿಸಿದರು.

ಗೃಹ ಸುರಕ್ಷಾ ಆ್ಯಪ್‌ಗೆ ವಿದೇಶದಿಂದಲೂ 9 ಮಂದಿ, ಇತರ ರಾಜ್ಯಗಳಿಂದ ಒಂದು, ಹೊರ ಜಿಲ್ಲೆಗಳಿಂದ 25 ಹಾಗೂ ಮಂಗಳೂರು ನಗರ ವ್ಯಾಪ್ತಿಯಿಂದ 52 ಕರೆಗಳು ಬಂದಿವೆ ಎಂದು ಎಸ್ಪಿ ತಿಳಿಸಿದ್ದಾರೆ.

  ಗೃಹ ಸುರಕ್ಷಾ ಆ್ಯಪ್ ಸೌಲಭ್ಯ ಪಡೆಯಲು 9480805300 ಸಂಖ್ಯೆಯ ವಾಟ್ಸ್‌ಆ್ಯಪ್‌ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News