×
Ad

ಮೂಡುಬಿದಿರೆ: ನಾಳೆ ಸುನ್ನಿ ಸಂಗಮ

Update: 2016-12-31 23:59 IST

ಮೂಡುಬಿದಿರೆ, ಡಿ.31: ಕೇರಳ ಕುಟ್ಯಾಡಿಯ ಸಿರಾಜುಲ್ ಹುದಾ ವಿದ್ಯಾ ಸಮುಚ್ಚಯಗಳ ಬೆಳ್ಳಿಹಬ್ಬದ ಪ್ರಯುಕ್ತ ಪೇರೋಡ್ ಉಸ್ತಾದರ ಸ್ನೇಹ ಸಂದೇಶ ಯಾತ್ರೆ ಹಾಗೂ ಬೃಹತ್ ಸುನ್ನಿ ಸಂಗಮ ಜ.2ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಎಚ್.ಐ. ಅಬೂಸುಫ್ಯಾನ್ ಇಬ್ರಾಹೀಂ ಮದನಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸೈಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ವೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್, ಎಂ.ಪಿ. ಅಶ್ರಫ್ ಸಅದಿ ಮಲ್ಲೂರು, ವೌಲಾನಾ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ, ಶಾಸಕ ಅಭಯಚಂದ್ರ ಜೈನ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಬ್ದುಸ್ಸಲಾಂ ಮದನಿ ಮಾರ್ನಾಡ್, ಮುಹಮ್ಮದ್ ಶರೀಫ್ ಸಅದಿ ಜ್ಯೋತಿನಗರ, ಮುಹಮ್ಮದ್ ಹನೀಫ್ ಗಂಟಾಲ್‌ಕಟ್ಟೆ ಹಾಗೂ ಮುತ್ತಲಿಬ್ ಮೂಡುಬಿದಿರೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News