×
Ad

ಆತೂರು ದ್ಸಿಕ್ರ್ ಹಲ್ಕಾ ವಾರ್ಷಿಕೋತ್ಸವ

Update: 2017-01-02 00:33 IST

ಉಪ್ಪಿನಂಗಡಿ, ಜ.1: ಅಲ್ಲಾಹುವಿನ ಸಂಪ್ರೀತಿ ಪಡೆಯಲು ದ್ಸಿಕ್ರ್ ಮಹತ್ವದ ಪಾತ್ರ ವಹಿಸುತ್ತದೆ ಜೊತೆಗೆ ನಮ್ಮ ಎಲ್ಲಾ ಸಮಸ್ಯೆಗಳಿಗೂ ದ್ಸಿಕ್ರ್‌ನಿಂದ ಪರಿಹಾರ ಸಾಧ್ಯ ಇದೆ ಎಂದು ಹಿರಿಯ ಧಾರ್ಮಿಕ ವಿದ್ವಾಂಸ ಡಾ.ಕೆ.ಎಂ.ಶಾಹ್ ಮುಸ್ಲಿಯಾರ್ ಹೇಳಿದರು.

ಅವರು ಶನಿವಾರ ಆತೂರು ಬದ್ರಿಯಾ ಜುಮಾ ಮಸೀದಿಯ ದ್ಸಿಕ್ರ್ ಹಲ್ಕಾ ವಾರ್ಷಿಕೋತ್ಸವದ ಸಲುವಾಗಿ ಹಮ್ಮಿಕೊಳ್ಳಲಾದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಜುನೈದ್ ಜಿಫ್ರಿ ತಂಳ್ ಅಧ್ಯಕ್ಷತೆ ವಹಿಸಿದ್ದರು.

ಅಸ್ಸೆಯದ್ ಇಬ್ರಾಹೀಂ ಅಲ್‌ಹಾದಿ ತಂಳ್ ದುಆಃಶೀರ್ವಚನ ನೀಡಿದರು. ಕಾಸರಗೋಡು ಯು.ಕೆ.ಮುಹಮ್ಮದ್ ಹನ್ೀ ನಿಝಾಮಿ ಉಪನ್ಯಾಸ ನೀಡಿದರು. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಬಿ.ಕೆ. ಅಬ್ದುರ್ರಝಾಕ್, ಆತೂರು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹನ್ೀ ೈಝಿ, ಹಾಜಿ ಇಬ್ರಾಹೀಂ ಮುಸ್ಲಿಯಾರ್, ಅಬ್ದುಲ್ಲತ್ೀ ಮುಸ್ಲಿಯಾರ್, ಅಬ್ದುರ್ರಹ್ಮಾನ್ ಅರ್ಶದಿ, ಅಬ್ದುಲ್ಲಾ ಮುಸ್ಲಿಯಾರ್, ಮೂಸಾ ಮುಸ್ಲಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಸೀದಿ ಕಾರ್ಯದರ್ಶಿ ಸಿರಾಜುದ್ದೀನ್ ಬಡ್ಡಮೆ ಸ್ವಾಗತಿಸಿ, ವಂದಿಸಿದರು. ರಫೀಕ್ ಆತೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News