ಸಂಸದರ ವಿವಾದಾತ್ಮಕ ಹೇಳಿಕೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡನೆ
Update: 2017-01-02 17:44 IST
ಸುಳ್ಯ, ಜ.2 : ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿವಾದಾತ್ಮಕ ಹೇಳಿಕೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಅಭಿವೃದ್ಧಿ ಮಾಡಲು ಇರುವವರು ನಾಶ ಮಾಡಲು ಹೊರಟಿದ್ದಾರೆ. ಇಂತಹ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದರು. ಅವರ ಹೇಳಿಕೆಯಿಂದ ಜಿಲ್ಲೆ ಜನರು ಭಯಭೀತರಾಗಿದ್ದು, ಈ ರೀತಿಯ ಹೇಳಿಕೆಗಳನ್ನು ಕೊಡಬಾರದು. ಸಮಸ್ತ ಜನರ ಮುಂದೆ ಅವರು ಸ್ಪಷ್ಟೀಕರಣ ನೀಡಬೇಕು . ಸಂಸದರ ಕ್ರಿಮಿನಲ್ ಹಿನ್ನೆಲೆಯನ್ನು ಅವರ ಹೇಳಿಕೆ ಎತ್ತಿತೋರಿಸುತ್ತದೆ ಎಂದರು.