×
Ad

ಪಡುಬಿದ್ರಿ : ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ

Update: 2017-01-02 20:12 IST

ಪಡುಬಿದ್ರಿ, ಜ.2: ಪಡುಬಿದ್ರಿ ಜಗದೀಶ್ ಹೆಗ್ಡೆ ಸಂಸ್ಮರಣಾರ್ಥ 6ನೇ ವರ್ಷದ ಹೊನಲು ಬೆಳಕಿನ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ ಹಾಗೂ ಸಮ್ಮಾನ ಕಾರ್ಯಕ್ರಮ ಪಡುಬಿದ್ರಿ ಶಟಲ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ನಡೆಯಿತು.


ಬ್ಯಾಡ್ಮಿಂಟನ್‌ನಲ್ಲಿ ಅಶ್ರಫ್-ಕೌಸರ್ ಜೋಡಿಯು ವಿನ್ನರ್ ಆಗಿ ಜಗದೀಶ್ ಹೆಗ್ಡೆ ಸಂಸ್ಮರಣಾರ್ಥ ಟ್ರೋಫಿ ತನ್ನದಾಗಿಸಿಕೊಂಡಿತು.

ಪ್ರಕಾಶ್ ರಾವ್-ರಮೀಜ್ ಹುಸೇನ್ ಮಲ್ಪೆ ಜೋಡಿಯು ರನ್ನರ್ ಅಪ್ ಪ್ರಶಸ್ತಿ ಪಡೆಯಿತು.

ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಆಗಿ ಪದೋನ್ನತಿ ಹೊಂದಿದ ಕ್ಲಬ್‌ನ ಸದಸ್ಯ ಸಂತೋಷ್, ಪತ್ರಕರ್ತ ಚೇತನ್ ಪಡುಬಿದ್ರಿ ಅವರನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು.

ಕ್ಲಬ್ ನ  ಹಿರಿಯ ಸದಸ್ಯ ವಿಜಯ್ ಆಚಾರ್ಯ ಬೆಂಗ್ರೆ ಅವರನ್ನು ಗೌರವಿಸಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News